2024 ರ ಮಾನ್ಸೂನ್ ಆರಂಭದ ನಡುವೆ ಅಯೋಧ್ಯೆ ರಾಮಮಂದಿರದ ಮೇಲ್ಛಾವಣಿಯು ‘ಸೋರುತ್ತಿದೆ’ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ‘ಆಶ್ಚರ್ಯ’ ವ್ಯಕ್ತಪಡಿಸಿದ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ‘ಇಲ್ಲಿ ಅನೇಕ ಎಂಜಿನಿಯರ್‌ಗಳು ಇದ್ದಾರೆ ಮತ್ತು ಪ್ರಾಣ ಪ್ರತಿಷ್ಠೆ ಜನವರಿ 22 ರಂದು ನಡೆಸಲಾಯಿತು, ಆದರೆ ಛಾವಣಿಯಿಂದ ನೀರು ಸೋರಿಕೆಯಾಗುತ್ತಿದೆ. ಯಾರೂ ಇದನ್ನು ಯೋಚಿಸಿರಲಿಲ್ಲ” ಎಂದು ಹೇಳಿದ್ದಾರೆ.
ಹೊಸದಾಗಿ ನಿರ್ಮಿಸಲಾದ ರಾಮ ಮಂದಿರಕ್ಕೆ ಸರಿಯಾದ ಒಳಚರಂಡಿ ಇಲ್ಲದಿರುವುದರಿಂದ ಮೇಲಿನಿಂದ ನೀರು ಸೋರಿಕೆಯಾಗುತ್ತದೆ. ವಿಗ್ರಹದ ಬಳಿ ಸಂಗ್ರಹವಾಗುತ್ತದೆ ಎಂದು ದಾಸ್ ಉಲ್ಲೇಖಿಸಿದ್ದಾರೆ.