ನವದೆಹಲಿ: ವಿದ್ಯಾರ್ಥಿ ಅಂದೋಲನ ನಡೆಸಿದ ತೀವ್ರ ಪ್ರತಿಭಟನೆಯ ಭಾಗವಾಗಿ ಶೇಖ್ ಹಸೀನಾ ರಾಜೀನಾಮೆ ನೀಡಿ ಬಾಂಗ್ಲಾದೇಶ ತೊರೆದ ನಂತರ ಸೇನೆಯು ವಿರೋಧ ಪಕ್ಷಗಳ ಸಲಹೆ ಮೇರೆಗೆ ಮಧ್ಯಂತರ ಸರಕಾರದ ಕುರಿತು ಘೋಷಿಸಿತ್ತು.
ಇದೀಗ ಬಾಂಗ್ಲಾದೇಶದ ಬೆಳವಣಿಗೆಗಳ ಕುರಿತು ಚರ್ಚಿಸಿ ನಿಲುವು ತಾಳಲು ಇಂದು ಸರ್ವಪಕ್ಷ ಸಭೆಗೆ ಕೇಂದ್ರದಿಂದ ಕರೆ ನೀಡಲಾಗಿದೆ. ಎಸ್ ಜೈಶಂಕರ್ ಮತ್ತು ಅಮಿತ್ ಶಾ ಅವರು ಸರ್ವ ಪಕ್ಷ ಸಭೆಯನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.