ಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿತ – ಓರ್ವ ಮಹಿಳೆಯ ಮೃತ್ಯು, ಯುವತಿಯ ರಕ್ಷಣೆ

ಬಂಟ್ವಾಳ, ಜು.7: ಸಜಿಪಮುನ್ನೂರು ಗ್ರಾಮದ ನಂದಾವರಗುಂಪು ಎಂಬಲ್ಲಿ ಗುಡ್ಡ ಕುಸಿದು ಮನೆಯೊಳಗೆ ಇಬ್ಬರು ಮಹಿಳೆಯರು ಸಿಲುಕಿಕೊಂಡಿದ್ದಾರೆ. ಓರ್ವ ಮಹಿಳೆಯನ್ನು ರಕ್ಷಿಸಲಾಗಿದ್ದು, ಮತ್ತೊರ್ವ ಮಹಿಳೆಯ ಮೃತಪಟ್ಟಿದ್ದಾರೆ.

ನಂದಾವರ ನಿವಾಸಿ ಮಹಮ್ಮದ್ ಎಂಬವರ ಪತ್ನಿ ಜರೀನಾ (49) ಮೃತಪಟ್ಟಿದ್ದಾರೆ. ಪುತ್ರಿ ಶಫಾ (20) ಅವಶೇಷಗಳಡಿ ಸಿಲುಕಿದ್ದರು. ಜರೀನಾಳನ್ನು ತಕ್ಷಣವೇ ರಕ್ಷಿಸಲಾಯಿತು.

ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರೊಂದಿಗೆ ಬಂಟ್ವಾಳ ಅಗ್ನಿಶಾಮಕ ದಳದ ಅಧಿಕಾರಿಗಳು, ಪೊಲೀಸರು ಹಾಗೂ ತಾಲೂಕು ಆಡಳಿತದ ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ.

ಬಂಟ್ವಾಳ ತಾಲೂಕಿನ ಹಲವೆಡೆ ಈ ರೀತಿಯ ಅವಘಡಗಳು ನಡೆಯುತ್ತಿವೆ ಎಂದು ವರದಿಯಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಕುಟುಂಬಸ್ಥರು ದೂರು ನೀಡಿದರೂ ಅಧಿಕಾರಿಗಳು ಕುಂಟು ನೆಪ ಹೇಳಿ ಜವಾಬ್ದಾರಿಯಿಂದ ದೂರ ಉಳಿಯುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ತಾಲೂಕಿನಲ್ಲಿ ಮನೆ, ಗುಡ್ಡಗಳು ಕುಸಿಯುವ ಸಾಧ್ಯತೆ ಹೆಚ್ಚು. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಅಭಿಪ್ರಾಯ.

Latest Indian news

Popular Stories