ಬಾರಕೂರು ದಲಿತ ಯುವಕನ ಶೂಟೌಟ್ ಪ್ರಕರಣ; ಪ್ರತಿಭಟನೆ ದ.ಸಂ.ಸ ಸಜ್ಜು – ನಾಳೆ ಉಡುಪಿಗೆ ಮಾವಳ್ಳಿ ಶಂಕರ್

ಉಡುಪಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಪ್ರಧಾನ ಸಂಚಾಲಕರಾದ ಅಣ್ಣಾ ಮಾವಳ್ಳಿ ಶಂಕರ್ ರವರು ಇದೇ ಮೇ 25 ರಂದು ಉಡುಪಿಗೆ ಆಗಮಿಸಲಿದ್ದಾರೆ.

ಮಾವಳ್ಳಿ ಶಂಕರ್ ರವರು ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಮೇ 25ನೇ ತಾರೀಖು ಶನಿವಾರ ಬೆಳಿಗ್ಗೆ 10-30 ಕ್ಕೆ ನಡೆಯುವ ದ.ಸಂ.ಸ.ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಮಟ್ಟದ ಸಭೆಯಲ್ಲಿ ಭಾಗವಹಿಸುವರು.

ಸಭೆ ಮುಗಿದ ನಂತರ ಮಧ್ಯಾಹ್ನ ಪತ್ರಿಕಾ ಗೋಷ್ಠಿ ನಡೆಸಿ ಉಡುಪಿ ಜಿಲ್ಲೆಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಮತ್ತು ಬಾರಕೂರು ದಲಿತ ಯುವಕನ ಶೂಟೌಟ್ ಪ್ರಕರಣದ ಬಗ್ಗೆ ಗೃಹ ಸಚಿವರು ಮತ್ತು ಮುಖ್ಯಮಂತ್ರಿ ರವರ ಗಮನಕ್ಕೆ ತರುವ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಮೇ 26 ರ ಭಾನುವಾರದಂದು ಕೋಟದಲ್ಲಿ ನಡೆಯುವ ದಲಿತ ಸಂಘರ್ಷ ಸಮಿತಿಯ ಸತತ 25 ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಆನಂತರ ಮಧ್ಯಾಹ್ನ 3 ಘಂಟೆಗೆ ಮಂಗಳೂರಿನಲ್ಲಿ ನಡೆಯುವ ದಕ್ಷಿಣ ಕನ್ನಡ ಜಿಲ್ಲಾ ದ.ಸಂ.ಸ.ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಗಳೂರಿಗೆ ತೆರಳಲಿದ್ದಾರೆ.

ಈ ಎರಡೂ ಕಾರ್ಯಕ್ರಮ ದಲ್ಲಿ ಉಡುಪಿಯ ಜಿಲ್ಲೆಯ ದಲಿತ ಮುಖಂಡರಾದ ಮಂಜುನಾಥ ಗಿಳಿಯಾರು , ಶ್ಯಾಮರಾಜ್ ಬಿರ್ತಿ , ವಾಸುದೇವ ಮುಧೂರು , ಶ್ಯಾಮಸುಂದರ ತೆಕ್ಕಟ್ಟೆ , ಪರಮೇಶ್ವರ ಉಪ್ಪೂರು , ಸುರೇಶ ಹಕ್ಲಾಡಿ , ರಾಜು ಬೆಟ್ಟಿನ ಮನೆ , ಕುಮಾರ್ ಕೋಟ ,ಭಾಸ್ಕರ ಮಾಸ್ಟರ್ ಕುಂಜಿಬೆಟ್ಟು , ದಯಾನಂದ ಕಪ್ಪೆಟ್ಟು , ಅಣ್ಣಪ್ಪ ನಕ್ರೆ , ಶ್ರೀಧರ ಕುಂಜಿಬೆಟ್ಟು , ಮಂಜುನಾಥ್ ಬಾಳ್ಕುದ್ರು , ಶ್ರೀನಿವಾಸ ವಡ್ಡರ್ಸೇ , ಮೊದಲಾದ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಸಂಚಾಲಕರಾದ ಸುಂದರ ಮಾಸ್ಟರ್ ಮಾಹಿತಿ ನೀಡಿದ್ದಾರೆ.

Latest Indian news

Popular Stories