ಬೆಳ್ತಂಗಡಿ: ಸಾಲ ನೀಡಿದ ಹಣ ಮರಳಿ ಕೇಳಿದ ಮಹಿಳೆಗೆ ಥಳಿಸಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತ ಎಂದು ಹೇಳಲಾಗುತ್ತಿರುವ ನವೀನ್ ಕನ್ಯಾಡಿ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಈತನ ವಿರುದ್ಧ IPC ಸೆಕ್ಷನ್ 354, 447,504,506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊಟ್ಟಿರುವ 7ಲಕ್ಷ ರೂ. ಸಾಲವನ್ನು ವಾಪಾಸ್ ಕೇಳಿದ್ದಕ್ಕೆ ನವೀನ್ ಕನ್ಯಾಡಿ ಉಜಿರೆಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದ ಧರ್ಮಸ್ಥಳ ನಿವಾಸಿ ರೂಪಾಗೆ ಹಿಗ್ಗಾಮುಗ್ಗಾ ಥಳಿಸಿದ್ದ. ಈ ದೃಶ್ಯಗಳು ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.