ಉಡುಪಿ: ಹೆಬ್ರಿಯ ಶಿವಪುರದಲ್ಲಿ ಸಚಿವ ಸುನೀಲ್ ಕುಮಾರ್ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ನಿನ್ನೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಪ್ರಮೋದ್ ಮುತಾಲಿಕ್ ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಕ್ಷೇತ್ರ ವ್ಯಾಪ್ತಿಯ ಹೆಬ್ರಿಯ ಶಿವಪುರದಲ್ಲಿ 67 ಎಕರೆ ಜಾಗವನ್ನು ಬೇನಾಮಿ ಹೆಸರಲ್ಲಿ ಖರೀದಿ ಮಾಡಿದ್ದಾರೆ.
ವಿದ್ಯಾ ಸುವರ್ಣ ಮತ್ತು ಗಜಾನನ್ ದತ್ ದಂಪತಿ ಹೆಸರಲ್ಲಿ ಈ ಜಮೀನು ಖರೀದಿ ಮಾಡಲಾಗಿದೆ. 4 ಕೋಟಿ 15 ಲಕ್ಷ ಬೆಲೆಗೆ ಇದನ್ನು ಖರೀದಿಸಲಾಗಿದ್ದು,ಈಗ ಅದೇ ಜಾಗವನ್ನು ಸರಕಾರ ಇಂಡಸ್ಟ್ರಿಯಲ್ ಏರಿಯಾ ಎಂದು ಘೋಶಣೆ ಮಾಡಲಾಗಿದೆ ಅಂತ ತಿಳಿಸಿದ್ದಾರೆ. ಚುನಾವಣೆಗೂ ಮುನ್ನ ಇದನ್ನು ಸಮಗ್ರವಾಗಿ ತನಿಖೆ ಮಾಡಬೇಕು ಎಂದು ಅವರು ಇದೇ ಒತ್ತಾಯಿಸಿದ್ದಾರೆ.