ಸಿಬಿಐ ವಿರುದ್ಧ ಬಂಗಾಳ ಅರ್ಜಿ ವಿಚಾರಣೆ ಯೋಗ್ಯವಾಗಿದೆ: ಸುಪ್ರೀಂಕೋರ್ಟ್

ನವದೆಹಲಿ: ಒಪ್ಪಿಗೆ ಇಲ್ಲದ ಹೊರತಾಗಿಯೂ ರಾಜ್ಯದಲ್ಲಿ ಕೇಂದ್ರ ತನಿಖಾ ದಳ(ಸಿಬಿಐ) ತನಿ ಖೆಯನ್ನು ನಡೆಸುತ್ತಿರುವುದಕ್ಕೆ ಆಕ್ಷೇಪ ಸಲ್ಲಿಸಿ ರುವ ಪಶ್ಚಿಮ ಬಂಗಾಳದ ಅರ್ಜಿ ವಿಚಾರಣೆ ಯೋಗ್ಯವಾಗಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, “ಕಾನೂನು ಪ್ರಕಾರ ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸು ತ್ತದೆ” ಎಂದು ಹೇಳಿದೆ.

ಅಲ್ಲದೇ, ಪಶ್ಚಿಮ ಬಂಗಾಳ ಅರ್ಜಿಗೆ ಕೇಂದ್ರ ಅಡ್ಡಿಯನ್ನು ತಳ್ಳಿ ಹಾಕಿದೆ. ಮುಂದಿನ ವಿಚಾರಣೆಯನ್ನು ಆ. 13ಕ್ಕೆ ನಡೆಸುವುದಾಗಿ ಹೇಳಿದೆ.

ಪ್ರಕರಣಗಳ ತನಿಖೆ ಅಥವಾ ದಾಳಿಗಳನ್ನು ನಡೆಸಲು ಸಿಬಿಐಗಿರುವ ಅನುಮತಿಯನ್ನು ಪಶ್ಚಿಮ ಬಂಗಾಳ ಸರ್ಕಾರವು 2018 ನವೆಂಬರ್‌ 16ರಂದೇ ತೆಗೆದು ಹಾಕಿದೆ.  ದಿಲ್ಲಿ ಸ್ಪೆಷಲ್‌ ಪೊಲೀಸ್‌ ಎಷ್ಟಾಬ್ಲಿಷ್‌ ಮೆಂಟ್‌ ಕಾಯ್ದೆ ಅನುಸಾರ ಸಿಬಿಐ ಆರಂಭವಾಗಿದೆ. ನಮ್ಮ ದೃಷ್ಟಿಯಲ್ಲಿ ಸಿಬಿಐ ಭಾರತ ಸರ್ಕಾರದ ಅಂಗ ಸಂಸ್ಥೆ ಅಥವಾ ವಿಭಾಗವಾಗಿದೆ ಎಂದು ನ್ಯಾ.ಬಿ. ಆ ರ್‌. ಗವಾಯಿ ಹಾಗೂ ಸಂದೀಪ್‌ ಮೆಹ್ತಾ ಅವರಿದ್ದ ಪೀಠವು ಹೇಳಿದೆ.

ರಾಜ್ಯಪಾಲ ಆರ್‌.ಎನ್‌.ರವಿ ವಿಧೇಯಕಗಳಿಗೆ ಅಂಗೀಕಾರ ನೀಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿತ್ತು. ಜತೆಗೆ ಅವರನ್ನು ವಾಪಸ್‌ ಕರೆಸಲು ಕೇಂದ್ರಕ್ಕೆ ಸೂಚನೆ ನೀಡಬೇಕು ಎಂದು ಒತಾಯಿಸಿತ್ತು. ಕೇರಳ ಕೂಡ ಕೇಂದ್ರದಿಂದ ಸೂಕ್ತ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ನಲ್ಲಿ ದಾವೆ ಹೂಡಿತ್ತು.

Latest Indian news

Popular Stories