ಬೆಂಗಳೂರು: ಇಡಿ ದಾಳಿಯಲ್ಲಿ ಬರೋಬ್ಬರಿ 11 ಕೋಟಿ ರೂ. ನಗದು, 120 ಕೋಟಿ ಮೌಲ್ಯದ ಚರ-ಸ್ಥಿರಾಸ್ತಿ ವಶ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಜಯ್ ತಾತ ಮತ್ತು ಸಹಚರರಿಗೆ ಸಂಬಂಧಿಸಿದ ಒಟ್ಟು ಎಂಟು ಸ್ಥಳಗಳಲ್ಲಿ ದಾಳಿ ನಡೆಸಿ ಬರೋಬ್ಬರಿ 11.25 ಕೋಟಿ ರೂಪಾಯಿ ಮತ್ತು 120 ಕೋಟಿ ಮೌಲ್ಯದ ಚರ-ಸ್ಥಿರಾಸ್ತಿಯನ್ನು ವಶಪಡಿಸಿಕೊಂಡಿದೆ.

ಜಾರಿ ನಿರ್ದೇಶನಾಲಯ ಆರೋಪಿಗಳ ಅಕೌಂಟ್‌ನಲ್ಲಿದ್ದ ಸುಮಾರು 11.25 ಕೋಟಿ ಹಣವನ್ನ ಫ್ರೀಜ್ ಮಾಡಲಾಗಿದ್ದು, 120 ಕೋಟಿ ಮೌಲ್ಯದ ಆಸ್ತಿ ಪತ್ರಗಳು, ಡಿಜಿಟಲ್ ಎವಿಡೆನ್ಸ್ ಜಪ್ತಿ ಮಾಡಲಾಗಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಫೆಬ್ರವರಿ 29 ಮತ್ತು ಮಾರ್ಚ್ 1ರಂದು ಬೆಂಗಳೂರಿನ 8 ಸ್ಥಳಗಳಲ್ಲಿ ಪಿಎಂಎಲ್‌ಎ 2002ರ ಅಡಿಯಲ್ಲಿ ಆರೋಪಿಗಳಾದ ವಿಜಯಾ ಆರ್ ತಾತಾ ಮತ್ತು ಅವರ ಸಹಚರರ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿತ್ತು ಎಂದು ಜಾರಿ ನಿರ್ದೇಶನಾಲಯ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಆರೋಪಿಗಳಿಗೆ ಸಂಬಂಧಿಸಿದ ಸಂಚಯ ಲ್ಯಾಂಡ್ ಅಂಡ್ ಎಸ್ಟೇಟ್‌ ಪ್ರೈವೇಟ್ ಲಿಮಿಟೆಡ್, ಬಿಸಿಸಿ ಕನ್​​ಸ್ಟ್ರಕ್ಷನ್​​, ಆಕಾಶ್ ಎಜುಕೇಷನ್ ಅಂಡ್ ಡೆವಲಪ್​ಮೆಂಟ್ ಹಾಗೂ ಎಸ್​ವಿ ಕ್ರಾನ್ ಕ್ರಿಯೇಟ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ದಾಳಿ ನಡೆಸಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನ ಸೀಜ್‌ ಮಾಡಲಾಗಿದೆ. ದಾಳಿ ವೇಳೆ ಕಂಪನಿಗಳಿಗೆ ಸಂಬಂಧಿಸಿದ ಚರಾಸ್ತಿ ಹಾಗೂ ಸ್ಥಿರಾಸ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ.‌ ಇದರ ಮೌಲ್ಯ ಸುಮಾರು 120 ಕೋಟಿ ಮೌಲ್ಯದಾಗಿದೆ. ಈ ಮೇಲಿನ ಕಂಪನಿಗಳ ವಿರುದ್ಧ ಕಡಿಮೆ ಬೆಲೆಗೆ ಆಕರ್ಷಕ ಫ್ಲ್ಯಾಟ್​ ಕೊಡಿಸುವುದಾಗಿ ನಂಬಿಸಿ ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಪಡೆದು ಫ್ಲ್ಯಾಟ್​ ನೀಡದೇ ವಂಚಿಸುತ್ತಿದ್ದರು ಎಂದು ಇಡಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories