‘ಭಾರತ್ ಮಾತಾ ಕೀ ಜೈ ಅಂದಿದ್ದಕ್ಕೆ ಎಫ್‌ಐಆರ್ ದಾಖಲಾದದ್ದಲ್ಲ; ಮಸೀದಿ ಮುಂದೆ ನಿಂದನಾತ್ಮಕ ಘೋಷಣೆ ಕೂಗಿದ್ದಕ್ಕೆ ಪ್ರಕರಣ ದಾಖಲು: ಪೊಲೀಸ್ ಕಮಿಷನರ್ ಸ್ಪಷ್ಟನೆ

ಮಂಗಳೂರು: ನಗರದ ಹೊರವಲಯದ ಬೋಳಿಯಾರ್‌ನಲ್ಲಿ ವಿಜಯೋತ್ಸವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಭಾರತ್ ಮಾತಾ ಕೀ ಜೈ ಅಂದಿದ್ದಕ್ಕೆ ಎಫ್‌ಐ‌ಆರ್ ದಾಖಲಿಸಲಾಗಿದೆಯೆಂದು ಗುಮಾನಿ ಹಬ್ಬಿಸಲಾಗಿದೆ. ಆದರೆ ಮಸೀದಿ ಮುಂಭಾಗ ಅವಾಚ್ಯ ಪದ ಬಳಸಿ ಒಂದು ಸಮುದಾಯವನ್ನು ನಿಂದಿಸಿ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಸ್ಪಷ್ಟಪಡಿಸಿದ್ದಾರೆ.
ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯೋತ್ಸವದ ವೇಳೆ ಮಸೀದಿ ಮುಂಭಾಗ ಸಾಗಿದ ತಂಡವು, ಮುಸ್ಲಿಮರನ್ನು ಪಾಕಿಸ್ಥಾನಿಗಳೆಂದೂ, ಮೋದಿ ಆಗಮನದಿಂದ ಆತಂಕಿತರಾಗಿದ್ದಾರೆ ಮೊದಲಾದ ಅರ್ಥ ಬರುವ ಘೋಷಣೆಗಳನ್ನು ಕೂಗಿದ್ದಾರೆ ಎಂದರು.

ಅಲ್ಲದೇ ಮುಸ್ಲಿಮರ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದಾರೆಂದು ಅವರು ಹೇಳಿದರು. ಈ ಬಗ್ಗೆ ಮಸೀದಿಯ ಅಧ್ಯಕ್ಷರ ದೂರಿನ ಹಿನ್ನೆಲೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಕಮಿಷನರ್ ಹೇಳಿದರು.

ಇನ್ನು ಚೂರಿ ಇರಿತ ಪ್ರಕರಣ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Latest Indian news

Popular Stories