ಸಂಬಿತ್ ಪಾತ್ರಾನಿಂದ ಮಹಾ ವಿವಾದ:  ಪ್ರಧಾನಿ ಮೋದಿಗೆ ಹೊಸ ‘ಭಕ್ತ’ ಎಂದ ಪಾತ್ರ ವಿರುದ್ಧ ಪುರಿ ಜಗನ್ನಾಥ್ ಭಕ್ತರ ಆಕ್ರೋಶ

ನವ ದೆಹಲಿ: ಬಿಜೆಪಿಯ ಸಂಬಿತ್ ಪಾತ್ರಾ ಇಂದು ಹಿಂದುಗಳಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿ ಪುರಿ ಜಗನ್ನಾಥ್ ದೇವರ ಭಕ್ತರ ಕೆಂಗಣ್ಣಿಗೆ  ಗುರಿಯಾಗಿದ್ದಾರೆ.

ಐದನೇ ಹಂತದ ಚುನಾವಣೆಯಲ್ಲಿ ಒಡಿಶಾ ಲೋಕಸಭೆ ಮತ್ತು ಹೊಸ ವಿಧಾನಸಭೆಗೆ ಮತದಾನ  ನಡೆಯುತ್ತಿರು  ಈ ಸಂದರ್ಭದಲ್ಲಿ ಪತ್ರಾ ಸುದ್ದಿಗಾರರೊಂದಿಗೆ ಮಾತನಾಡಿ, ಪುರಿಯ ಪ್ರಧಾನ ದೇವರರಾದ ಭಗವಾನ್ ಜಗನ್ನಾಥ “ಮೋದಿ ಅವರ ಭಕ್ತ” ಎಂದು ಹೇಳಿದರು. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆಕ್ರೋಶಿತರಾಗಿ ಪತ್ರಾ ಅವರು ಸ್ಪಷ್ಟೀಕರಣವನ್ನು ನೀಡಿದ್ದು ಇದು “ನಾಲಿಗೆ ತಪ್ಪಿ ಹೇಳಿದ ಹೇಳಿಕೆ” ಎಂದು ತೇಪೆ ಹಚ್ಚುವ ಪ್ರಯತ್ನ ನಡೆಸಿದ್ದಾರೆ.

“ಪ್ರಧಾನಿ ಮೋದಿಯನ್ನು ನೋಡಲು ಲಕ್ಷಗಟ್ಟಲೆ ಜನರು ಜಮಾಯಿಸಿದ್ದಾರೆ. ಪುರಿ ಜಗನ್ನಾಥ್ ಮೋದಿಯವರ ಭಕ್ತ. ನಾವೆಲ್ಲರೂ ಪ್ರಧಾನಿ ಮೋದಿಯವರ ಕುಟುಂಬ. ನನ್ನ ಭಾವನೆಗಳನ್ನು ನಾನು ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ಇಂದು ಎಲ್ಲಾ ಒಡಿಯಾಸ್‌ಗಳಿಗೆ ಮಹತ್ವದ ದಿನ ಎಂದು ನಾನು ಭಾವಿಸುತ್ತೇನೆ” ಎಂದು ಪುರಿಯಿಂದ ಅಭ್ಯರ್ಥಿಯಾಗಿರುವ ಪಾತ್ರ ಹೇಳಿದ್ದರು.

ನವೀನ್ ಪಟ್ನಾಯಕ್‌ ತಕ್ಷಣ ಸಂಭೀತ್ ಪಾತ್ರ ಮಾತನ್ನು ಖಂಡಿಸಿದ್ದಾರೆ. ಮಹಾಪ್ರಭು ಶ್ರೀ ಜಗನ್ನಾಥ ಬ್ರಹ್ಮಾಂಡದ ಭಗವಂತ. ಮಹಾಪ್ರಭುವನ್ನು ಇನ್ನೊಬ್ಬ ಮನುಷ್ಯನ ಭಕ್ತ ಎಂದು ಕರೆಯುವುದು ಭಗವಂತನಿಗೆ ಮಾಡಿದ ಅವಮಾನ. ಇದು ಪ್ರಪಂಚದಾದ್ಯಂತದ ಕೋಟ್ಯಂತರ ಜಗನ್ನಾಥ ಭಕ್ತರು ಮತ್ತು ಓಡಿಯಾಗಳ ಭಾವನೆಗಳನ್ನು ಘಾಸಿಗೊಳಿಸಿದೆ” ಎಂದು  ಪಟ್ನಾಯಕ್ ಪೋಸ್ಟ್ ಮಾಡಿದ್ದಾರೆ.

Latest Indian news

Popular Stories