ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರ ಎದುರೇ ಬಿಜೆಪಿ ಶಾಸಕರ ಆರ್ಭಟ

ಕಾರವಾರ: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಎದುರೇ ಕುಮಟಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರ ಮೇಲೆ ಹರಿಹಾಯ್ದರೆ, ಸಬ್ ರಿಜಸ್ಟ್ರಾರ್ ವಿರುದ್ಧ ಆರ್ಭಟಿಸಿದ ಘಟನೆ ನಡೆಯಿತು.


ಚಕ್ರ ಕಲ್ಲು ಗಣಿಗಾರಿಕೆಗೆ ಅಕ್ರಮದ ಹೆಸರಲ್ಲಿ ದಂಡ ಹಾಕುವಾಗ ಬಿಜೆಪಿ ಉದ್ಯಮಿಗೆ 3 ಲಕ್ಷ ದಂಡ ಹಾಕಿದ್ದೀರಿ‌ . ಒಟ್ಟು 9.5 ಲಕ್ಷ ದಂಡ ಹಾಕಿದ್ದೀರಿ.ಆದರೆ ಕರ್ಕಿ, ಮೂರೂರು ನಲ್ಲಿ ನಡೆಯುವ ಚಿರೆಕಲ್ಲು ಗಣಿಗಾರಿಕೆ ಕಡೆ ನಿಮ್ಮ ಗಮನ ಯಾಕೆ ಬಿದ್ದಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿ ಉದ್ಯಮಿಗೆ ಟಾರ್ಗೆಟ್ ಮಾಡುತ್ತಿದ್ದೀರಿ ಎಂದಾಗ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ನಗುತ್ತಾ, ಹಾಗೆ ಹೇಳಬಾರದು. ಸಮಸ್ಯೆ ಹೇಳಿ ಅಂದರು. ಚಿರೇಕಲ್ಲು ಗಣಿಗಾರಿಕೆ ಸಕ್ರಮಮಾಡಿ,‌ತೆರಿಗೆ ಹಾಕಿ ,ರಾಜಸ್ವ ವಸೂಲಿ ಮಾಡಿ ಎಂಬ ಸಲಹೆ ಬಂತು.


ಅಷ್ಟಕ್ಕೆ ಸುಮ್ಮನಾಗದ ಶಾಸಕ ಶೆಟ್ಟಿ ಪೊಲೀಸರು, ಪೋಸ್ಟ್ ಮಾರ್ಟಂ ನಂತರ ಶವ ಒಯ್ಯಲು ಸಾರ್ವಜನಿಕ ರಿಂದ 5000 ಹಣ ತಗೋತಿದಾರೆ ಎಂದು ಅಪಾದಿಸಿದರು. ಎಸ್ಪಿ ಎದುರೇ , ಕುಮಟಾ ಪೊಲೀಸರು ಜೂಜು, ಮಟ್ಕಾ , ಸರಾಯಿ ಮಾರಾಟಗಾರರಿಂದ ಹಣ ಪಡೆಯುತ್ತಾರೆ. ಇಲ್ಲಿ ಇದನ್ನು ನಿಯಂತ್ರಣ ಮಾಡುವವರೇ ಇಲ್ಲ ಎಂದರು.
ಸಬ್ ರಿಜಿಸ್ಟ್ರಾರ್ ಕಚೇರಿ ಕುಮಟಾ ಆಡಳಿತ ಸೌಧಕ್ಕೆ ಯಾಕೆ ಸ್ಥಳಾಂತರ ಮಾಡಿಲ್ಲ? ಖಾಸಗಿಯವರಿಗೆ ಬಾಡಿಗೆ ಕೊಟ್ಟು, ಸರ್ಕಾರಕ್ಕೆ ನಷ್ಟ ಮಾಡುತ್ತಿದ್ದೀರಿ ಎಂದು ಅಪಾದಿಸಿದರು. ಕುಮಟಾ ಸಬ್ ರಿಜಿಸ್ಟ್ರಾರ್ ಮಾತನಾಡಿ, ಮಾದರಿ ಸಬ್ ರಿಜಿಸ್ಟ್ರಾರ್ ಕಚೇರಿ ಮಾಡಲು ಇಲಾಖೆ ಕೆಎಚ್ ಬಿ ಎಂಜಿನಿಯರ್ ಇಲಾಖೆಗೆ 20 ಲಕ್ಷ ನೀಡಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವವರಿಗೆ ವಿಐಪಿ ಲಾಂಚ್ ಹಾಗೂ ತಾಯಂದಿರಿಗೆ ಫೀಡಿಂಗ್ ಕೊಣೆ ಮಾಡಲು ಉದ್ದೇಶಿಸಿದೆ. ಇದು ಬೆಂಗಳೂರು ಮಟ್ಟದ ಅಧಿಕಾರಿಯಿಂದ ಅನುಮತಿ ಬರಬೇಕು ಎಂದರು. ಆಗ ಮತ್ತೆ ತಕರಾರು ತೆಗೆದ ಶಾಸಕ ದಿನಕರ ಶೆಟ್ಟಿ , ನನಗೆ ಪೊನ್ ಮಾಡಬೇಕಿತ್ತು. 20 ಲಕ್ಷ ಮಂಜೂರಾದ ಹಣದ ವಿಷಯ ನನಗೇಕೆ ಹೇಳಿಲ್ಲ. ಏನೇ ಇದ್ದರೂ ನನಗೆ ಹೇಳಿ, ನಾನು ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಕೆಲಸ ಮಾಡಿಸುವೆ ಎಂದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಕರೆದ ಸಭೆಗೆ ಆಡಳಿತ ಪಕ್ಷದ ಶಾಸಕ ಭೀಮಣ್ಣ ನಾಯ್ಕ ಮಾತ್ರ ಹಾಜರಿದ್ದರು.
…..

Latest Indian news

Popular Stories