12 ರಾಜ್ಯದಲ್ಲಿ ಬಿಜೆಪಿ ಆಡಳಿತ | ಮೂರರಲ್ಲಿ ಕಾಂಗ್ರೆಸ್ | 2024 ಲೋಕಸಭಾ ಚುನಾವಣೆಯ ಮಹತ್ವ!

ನವ ದೆಹಲಿ: 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ದೇಶದ ಹೃದಯಭಾಗದ ಮೂರು ರಾಜ್ಯಗಳಲ್ಲಿನ ಗೆಲುವು ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ. ಈ ಫಲಿತಾಂಶದಿಂದಾಗಿ ಅದು ಮೂರನೇ ಬಾರಿಗೆ ನೇರ ಅಧಿಕಾರದ ನಿರೀಕ್ಷೆಯಲ್ಲಿದೆ. 

ಪಕ್ಷವು ಈಗ 12 ರಾಜ್ಯಗಳಲ್ಲಿ ಆಡಳಿತದಲ್ಲಿದ್ದು ಇದು ದೇಶದ ಜನಸಂಖ್ಯೆಯ ಶೇಕಡಾ 41 ರಷ್ಟು ಜನಸಂಖ್ಯೆ ಹೊಂದಿದೆ. ಬಿಜೆಪಿಯ ಮೈತ್ರಿ ಸರ್ಕಾರಗಳು ಸೇರಿ ಶೇಕಡಾ 50 ಕ್ಕಿಂತ ಹೆಚ್ಚು ಜನರನ್ನು ಒಳಗೊಂಡ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಇದರ ಲಾಭ ಬಿಜೆಪಿಗೆ ಹೆಚ್ಚಾಗುವ ಸಾಧ್ಯತೆ ಇದೆ.

ಪ್ರಸ್ತುತ ಬಿಜೆಪಿಯು ದೇಶದ 12 ರಾಜ್ಯಗಳಲ್ಲಿ ತನ್ನದೇ ಆದ ಸರ್ಕಾರವನ್ನು ಹೊಂದಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಅಸ್ಸಾಂ, ಛತ್ತೀಸ್‌ಗಢ, ಹರಿಯಾಣ, ಉತ್ತರಾಖಂಡ, ತ್ರಿಪುರ, ಮಣಿಪುರ, ಗೋವಾ ಮತ್ತು ಅರುಣಾಚಲ ಪ್ರದೇಶ ದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಇದರ ಮೈತ್ರಿ ಸರ್ಕಾರಗಳು ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಂನಲ್ಲಿದೆ.

ಇನ್ನೂ ಕಾಂಗ್ರೆಸ್ ರಾಜಸ್ಥಾನ, ಛತ್ತೀಸ್ಗಢದಲ್ಲಿ ಅಧಿಕಾರ ಕಳೆದುಕೊಂಡು ಮೂರಕ್ಕೆ ಕುಸಿದಿದೆ. ತೆಲಂಗಾಣದಲ್ಲಿ ಗೆದ್ದಿದೆ.

ದೇಶದ ಜನಸಂಖ್ಯೆಯ ಕೇವಲ 8.51 ಪ್ರತಿಶತವನ್ನು ಒಳಗೊಂಡಿರುವ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಸೇರಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಬಿಹಾರ ಮತ್ತು ಜಾರ್ಖಂಡ್‌ನ ಆಡಳಿತ ಮೈತ್ರಿಗಳನ್ನು ಲೆಕ್ಕ ಹಾಕಿದರೆ ಅದು 19.84 ಪ್ರತಿಶತ ಭಾರತೀಯರ ಮೇಲೆ ಆಡಳಿತ ನಡೆಸುತ್ತಿದೆ.

ಪ್ರಮುಖ ಮತದಾರರನ್ನು ಹೊಂದಿರುವ ಉತ್ತರ ಭಾರತದ ಪ್ರಮುಖ ರಾಜ್ಯಗಳು ಬಿಜೆಪಿಯ ತೆಕ್ಕೆಯಲ್ಲಿದೆ.

ಉತ್ತರ ಭಾರತದಲ್ಲಿ ಕಾಂಗ್ರೆಸ್ ಹಿಡಿತ ಕೈ ತಪ್ಪಿರುವುದರಿಂದ ಕಾಂಗ್ರೆಸ್ ಮೈತ್ರಿಕೂಟದ ಸದಸ್ಯರಿಂದಲೂ ಟೀಕೆಗೆ ಗುರಿಯಾಗುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆ ಪಂಚ ರಾಜ್ಯದ ಫಲಿತಾಂಶದೊಂದಿಗೆ ಬಿಜೆಪಿಗೆ ಕೊಂಚ ಆಶಾದಾಯಕ ವಾತಾವರಣ ಸೃಷ್ಟಿಸಿದೆ.

Latest Indian news

Popular Stories