ಸರಕಾರದ ವಿರುದ್ದ ಮಡಿಕೇರಿಯಲ್ಲಿ ಬೀದಿಗಿಳಿದ ಬಿಜೆಪಿ

ಜಿಲ್ಲಾ ಬಿಜೆಪಿ ಯಿಂದ ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ವಕ್ಫ್ ಬೋರ್ಡ್ ನಿಂದ ಭೂಕಬಳಿಕೆ ಆರೋಪದ ಹಿನ್ನೆಲೆ ಹಾಗೂ
ವಕ್ಫ್ ಸಚಿವ ಜಮೀರ್ ಅಹ್ಮದ್ ವಿರುದ್ದ ಪ್ರತಿಭಟನೆಗಾರರು ಕಿಡಿಕಾರಿದರು.

ವಕ್ಫ್ ಬೋರ್ಡ್ ಬಡವರ ಭೂಮಿ ನುಂಗುತ್ತಿದೆ ಎಂದು ಪ್ರತಿಭಟನೆ ಕಾರು ಆರೋಪಿಸಿದರು.

ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನೆಗಾರರು
ಸಿಎಂ,ಡಿಸಿಎಂ ವಿರುದ್ದ ದಿಕ್ಕಾರ ಹಾಕಿ ಕಿಡಿಕಾರಿದರು.
ಕಾಂಗ್ರೆಸ್ ಸರಕಾರ,ಹಾಗು ವಕ್ಫ್ ಬೋರ್ಡ್ ತೊಲಗಿಸುವಂತೆ ಕರೆನೀಡಿದರು.

ಕೊಡಗಿನಲ್ಲೂ 16 ಜನರಿಗೆ ನೋಟೀಸ್
ನೀಡಲಾಗಿದ್ದು ಕೂಡಲೆ ರದ್ದುಗೊಳಿಸುವಂತೆ ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವಿ ಕಾಳಪ್ಪ, ಪಕ್ಷದ ವಿವಿಧ ತಾಲೂಕ ಅಧ್ಯಕ್ಷರು ವಿವಿಧ ಘಟಕದ ಪದಾಧಿಕಾರಿಗಳು ವಿಧಾನಪರಿಷತ್ ಸದಸ್ಯ ಸುಜಾಕುಶಾಲಪ್ಪ, ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Latest Indian news

Popular Stories