ಮುಸ್ಲಿಂ ಮಹಿಳೆಯರೊಂದಿಗೆ ಉದ್ಧಟತನ ತೋರಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಎಫ್.ಐ.ಆರ್

ಹೈದರಾಬಾದ್: ಹೈದರಾಬಾದ್‌ನ ಬಿಜೆಪಿ ಅಭ್ಯರ್ಥಿ, ವಿವಾದಿತ ನಾಯಕಿ ಕೊಂಪೆಲ್ಲಾ ಮಾಧವಿ ಲತಾ ಅವರು ಮತಗಟ್ಟೆಯಲ್ಲಿ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರನ್ನು ತಮ್ಮ ಮತದಾರರ ಗುರುತಿನ ಚೀಟಿಯಲ್ಲಿರುವ ಫೋಟೋಗಳೊಂದಿಗೆ ಹೊಂದಿಸಲು ತಮ್ಮ ಮುಖವನ್ನು ತೋರಿಸುವಂತೆ ಒತ್ತಾಯಿಸಿತ್ತಿರು  ವೀಡಿಯೊವನ್ನು ವೈರಲಾದ ನಂತರ ಪೊಲೀಸ್ ಕೇಸ್ ದಾಖಲಿಸಲಾಗಿದೆ.

ಇಂದು ನಡೆಯುತ್ತಿರುವ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಚುನಾವಣೆಯಲ್ಲಿ ಹೆಚ್ಚು ಧಾರ್ಮಿಕ ದ್ವೇಷಪೂರಿತ ಭಾಷಣಕ್ಕೆ ಕುಖ್ಯಾತರಾದ ಅಭ್ಯರ್ಥಿಗಳ ಪೈಕಿ ಮಾಧವಿ ಲತಾ ಕೂಡ ಒಬ್ಬರು. ಅವರು  ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಕಡಿಮೆಯಿದ್ದರೂ ಹೈದರಾಬಾದ್‌ನಿಂದ ನಾಲ್ಕು ಬಾರಿ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧಿಸುತಿದ್ದಾರೆ.

ಮಾಧವಿ ಲತಾ ಅವರ ಗುರುತನ್ನು ಪರಿಶೀಲಿಸಲು ಯಾರೊಬ್ಬರ ಮುಸುಕನ್ನು ಎತ್ತುವ ಹಕ್ಕು ಯಾವುದೇ ಅಭ್ಯರ್ಥಿಗೆ ಇಲ್ಲದಿರುವುದರಿಂದ ಅವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ರೊನಾಲ್ಡ್ ರಾಸ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಅನುಮಾನವಿದ್ದಲ್ಲಿ, ಅಭ್ಯರ್ಥಿಗಳು ಮತದಾರರ ಗುರುತನ್ನು ಪರಿಶೀಲಿಸಲು ಚುನಾವಣಾಧಿಕಾರಿಯನ್ನು ಕೇಳಬಹುದು ಎಂದು ಅವರು ಹೇಳಿದ್ದಾರೆ.

https://twitter.com/ANI/status/1789890173053878438?t=MDgX9xOeTrF2xKQyl6TN1g&s=19Latest Indian news

Popular Stories