IPS ಅಧಿಕಾರಿಗೆ “ಖಾಲಿಸ್ತಾನಿ” ಎಂದು ಬಿಜೆಪಿಯ ಸುವೇಂದು ಅಧಿಕಾರಿ ನಿಂದನೆ – ವ್ಯಾಪಕ ಆಕ್ರೋಶ

ಪ.ಬ: ಕೋಲ್ಕತ್ತಾ: ಬಂಗಾಳದ ಸಿಖ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಬಿಜೆಪಿ ನಾಯಕರೊಬ್ಬರು “ಖಾಲಿಸ್ತಾನಿ” ಎಂದು ನಿಂದನೆ ಮಾಡಿರುವುದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಖ್ ಸಂಸ್ಥೆ ಎಸ್‌ಜಿಪಿಸಿ (ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ) ಮತ್ತು ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ. ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಈ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ರಾಜ್ಯ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. 

ಬಿಜೆಪಿ ಆರೋಪವನ್ನು ತಳ್ಳಿಹಾಕಿದೆ. ಪೊಲೀಸರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಅಧೀನರಾಗಿದ್ದಾರೆ ಎಂದು ಆರೋಪಿಸಿದೆ.

ನಮ್ಮದೇ ಅಧಿಕಾರಿಯೊಬ್ಬರನ್ನು ರಾಜ್ಯದ ವಿರೋಧ ಪಕ್ಷದ ನಾಯಕ ‘ಖಲಿಸ್ತಾನಿ’ ಎಂದು ಕರೆದಿದ್ದಾರೆ. ಅವರು ಹೆಮ್ಮೆಯ ಸಿಖ್ ಮತ್ತು ಕಾನೂನನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಸಮರ್ಥ ಪೋಲೀಸ್ ಅಧಿಕಾರಿಯಾಗಿದ್ದಾರೆ. ಈ ಕಾಮೆಂಟ್ ತುಂಬಾ ದುರುದ್ದೇಶಪೂರಿತವಾಗಿದೆ. ಇದು ಕೋಮು ಪ್ರಚೋದಿತ ಮತ್ತು ಜನಾಂಗೀಯವಾಗಿದೆ. ಇದು ಕ್ರಿಮಿನಲ್ ಕೃತ್ಯವಾಗಿದೆ ” ಎಂದು ರಾಜ್ಯ ಪೋಲೀಸ್‌ ತಿಳಿಸಿದೆ.

Latest Indian news

Popular Stories