ಬ್ರೇಕಿಂಗ್ ನ್ಯೂಸ್: ಯುಕೆ ಚುನಾವಣೆ 2024; ಲೆಬರ್ ಪಕ್ಷಕ್ಕೆ ಐತಿಹಾಸಿಕ ಜಯ – ಭಾರತದ ಅಳಿಯ ರಿಷಿ ಸುನಕ್ ಪಕ್ಷಕ್ಕೆ ಹೀನಾಯ ಸೋಲು

2024 ರ ಯುಕೆ ಚುನಾವಣೆಯಲ್ಲಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷವು ಹೀನಾಯ ಸೋಲನ್ನು ಅನುಭವಿಸಿದೆ. ಕೀರ್ ಸ್ಟಾರ್ಮರ್ ಅವರ ನಾಯಕತ್ವದಲ್ಲಿ ಲೇಬರ್ ಪಕ್ಷವು ಐತಿಹಾಸಿಕ ಗೆಲುವು ಸಾಧಿಸಿದೆ.

ಈಗ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವ ಕೀರ್ ಸ್ಟಾರ್ಮರ್ ತಮ್ಮ ವಿಜಯ ಭಾಷಣದಲ್ಲಿ “ರಾಷ್ಟ್ರೀಯ ಹೊಸ ಬದಲಾವಣೆ” ಕುರಿತು ಪ್ರತಿಜ್ಞೆ ಮಾಡಿದ್ದಾರೆ. ಸ್ಟಾರ್ಮರ್‌ನ ಪ್ರಚಾರವು ರಾಷ್ಟ್ರದ ಆರ್ಥಿಕತೆಯನ್ನು ಪುನರ್ನಿರ್ಮಾಣ ಮಾಡುವುದು, ಸಾರ್ವಜನಿಕ ಸೇವೆಗಳಲ್ಲಿ ಹೂಡಿಕೆ ಮಾಡುವುದು ಮತ್ತು ಹವಾಮಾನ ಬದಲಾವಣೆಯನ್ನು ಪರಿಹರಿಸುವುದು, ದೇಶಾದ್ಯಂತ ಮತದಾರರೊಂದಿಗೆ ಪ್ರತಿಧ್ವನಿಸುವುದರ ಮೇಲೆ ಕೇಂದ್ರೀಕರಿಸಿತ್ತು.

ನಿರ್ಗಮಿತ ಪ್ರಧಾನಿ ರಿಷಿ ಸುನಕ್ ರಿಚ್ಮಂಡ್‌ನಲ್ಲಿ ತಮ್ಮ ಸಂಸದೀಯ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರ ಗೆಲುವು ಕಡಿಮೆ ಅಂತರದಿಂದ ಎಂಬುವುದು ಗಮನಾರ್ಹ.

ಸುನಕ್ ಈಗಾಗಲೇ ತಮ್ಮ ಭಾಷಣದಲ್ಲಿ ಸೋಲನ್ನು ಒಪ್ಪಿಕೊಂಡು ಪಕ್ಷದ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ್ದಾರೆ.

ಸದ್ಯಕ್ಕೆ ಲೆಬರ್ ಪಕ್ಷ 406 ಸ್ಥಾನದಲ್ಲಿ ಗೆಲುವಿನ ಸಮೀಪದಲ್ಲಿದೆ‌. ಕನಸರ್ವೆಟಿವ್ ಪಕ್ಷ 112 ಸ್ಥಾನದಲ್ಲಿ ಗೆಲುವಿನ ಹಾದಿಯಲ್ಲಿದೆ‌.

Latest Indian news

Popular Stories