ಬೈಂದೂರು: ಅನುಮಾಸ್ಪದ ರೀತಿಯಲ್ಲಿ ಕೇರಳ ನೊಂದಣಿಯ ಕಾರೊಂದು ತಿರುಗಾಡುತ್ತಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ ಕಾರನ್ನು ಬೆನ್ನಟ್ಟಿ ನಿಲ್ಲಿಸಲು ಸೂಚಿಸದರೂ ನಿಲ್ಲಿಸದೆ ಪರಾರಿಯಾಗಿದ್ದಾರೆ.
ಜೂನ್ 26 ರಂದು ಬೈಂದೂರು ಠಾಣೆಯ ಉಪ ನಿರೀಕ್ಷಕರಾದ ತಿಮ್ಮೇಶ್ ಬಿ.ಎನ್ ಕುಂದಾಪುರದಲ್ಲಿ ಮೀಟಿಂಗ್ ಮುಗಿಸಿಕೊಂಡು ಇಲಾಖೆಯ ಜೀಪಿನಲ್ಲಿ ವಾಪಾಸು ಬೈಂದೂರಿಗೆ ಬರುತ್ತಿದ್ದಾಗ ನಾವುಂದ ಪರಿಸರದಲ್ಲಿ KL-11 ನೊಂದಣಿಯ ಆಕಾಶ ನೀಲಿ ಬಣ್ಣದ ಐ20 ಕಾರು ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿರುವುದಾಗಿ ಮಾಹಿತಿ ಬಂದಿದೆ.
ನಾವುಂದ ದಲ್ಲಿ ರೌಂಡ್ಸ್ ಮಾಡುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಡಾಕೆರೆ ಕ್ರಾಸ್ ನಲ್ಲಿ ಪಶ್ಚಿಮ ಬದಿಯ ರಸ್ತೆಯಲ್ಲಿ ವಾಹನವು ಬೈಂದೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದು ವಾಹವನ್ನು ನಿಲ್ಲಿಸಲು ಸೂಚಿಸಿದರೂ ಕೂಡ ನಿಲ್ಲಿಸದೇ ವಾಹನವನ್ನು ಬೈಂದೂರು -ಭಟ್ಕಳ ಕಡೆಗೆ ಚಲಾಯಿಸಿಕೊಂಡು ಹೋಗಿದ್ದಾರೆ. ಕಾರನ್ನು ಇಲಾಖಾ ಜೀಪಿನಲ್ಲಿ ಬೆನ್ನಟ್ಟಿ ಹೋಗಿ ವಾಹನದ ಬಗ್ಗೆ ಹೆದ್ದಾರಿ ಗಸ್ತು ವಾಹನ ಹಾಗೂ ಶೀರೂರು ಚೆಕ್ ಪೋಸ್ಟ್ ಕರ್ತವ್ಯದ ಸಿಬ್ಬಂದಿಯವರಿಗೆ ಮಾಹಿತಿ ನೀಡಿ ಕಾರನ್ನು ನಿಲ್ಲಿಸಲು ಸೂಚನೆ ನೀಡಿದ್ದು ಕಾರು ಚಾಲಕನು ಶಿರೂರು ಟೋಲ್ ಹತ್ತಿರ ಹೋಗಿ ಅಲ್ಲಿ ಪೊಲೀಸರು ನಿಲ್ಲಿಸಲು ಸೂಚನೆ ನೀಡಿದರೂ ಕಾರನ್ನು ನಿಲ್ಲಿಸದೇ ಯೂ ಟರ್ನ್ ಮಾಡಿ ಬೈಂದೂರು ಕಡೆಗೆ ಬಂದು ಶಿರೂರು ಸಿಲ್ವರ್ ಆರ್ಚ್ ಬಾರ್ ಹತ್ತಿರ ಕಾರನ್ನು ಯೂ ಟರ್ನ್ ಮಾಡಿ ಪುನಃ ಶಿರೂರು ಕಡೆಗೆ ಹೋಗಿ ಪುನಃ ಟೋಲ್ ನಲ್ಲಿ ಪೊಲೀಸರು ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ ಕಾರನ್ನು ನಿಲ್ಲಿಸದೇ ಟೋಲ್ ನಲ್ಲಿ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಹಾರಿಸಿಕೊಂಡು ಪರಾರಿಯಾಗಿದ್ದಾನೆ.
ಕಾರಿನಲ್ಲಿ ಚಾಲಕ ಹಾಗೂ ಇತರರು ಕುಳಿತುಕೊಂಡಿರುವುದು ಕಂಡುಬಂದಿರುತ್ತದೆ. ಕಾರು ಚಾಲಕನು ಕಾರನ್ನು ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರ ಪ್ರಾಣ ಆಸ್ತಿಗೆ ಅಪಾಯ ಉಂಟಾಗುವ ಸ್ಥಿತಿಯಲ್ಲಿ ಅಡ್ಡಾದಿಡ್ಡಿಯಾಗಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 178/2024 ಕಲಂ: 279, 336 ಐಪಿಸಿ & 184,119,177 IMV ACT ರಂತೆ ಪ್ರಕರಣ ದಾಖಲಾಗಿದೆ.