ಲೋಕಸಭಾ ಚುನಾವಣೆ ನಡುವೆ ಸಿಎಎ ಜಾರಿ; ಮತದಾರರ ಮೇಲೆ ಪ್ರಭಾವ | ಕ್ರಮ ಕೈಗೊಳ್ಳಲು ಐಯುಎಂಎಲ್ ಆಗ್ರಹ

ತಿರುವನಂತಪುರಂ (ಕೇರಳ) , ಮೇ 16 : ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿಕೆ ಕುಂಜಾಲಿಕುಟ್ಟಿ ಅವರು ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಸಿಎಎ ಅನುಷ್ಠಾನ ಮತದಾನದ ಮೇಲೆ ಪ್ರಭಾವ ಬೀರುತ್ತದೆ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಇದು ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರ ನೀಡಿದ ಭರವಸೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕುಂಜಾಲಿಕುಟ್ಟಿ ಹೇಳಿದರು.

ಲೋಕಸಭೆ ಚುನಾವಣೆಯ ನಡುವೆ ಮತದಾರರ ಪ್ರಭಾವ ಬೀರಲು ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ. ಅದೂ ಕೂಡ ಚುನಾವಣಾ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗವು ಕ್ರಮ ತೆಗೆದುಕೊಳ್ಳಬೇಕು ಒತ್ತಾಯಿಸಿದರೆ.

ಈ ನಡುವೆ ಬುಧವಾರ ಸಿಎಎ ಅನುಷ್ಠಾನದ ಭಾಗವಾಗಿ 14 ಮಂದಿಗೆ ಭಾರತದ ಪೌರತ್ವ ನೀಡಲಾಗಿದೆ.

Latest Indian news

Popular Stories