ಉ.ಕ | ಕೆನರಾ ಸಂಸದರು ಈ ಸಲ ಪ್ರಾತಿನಿಧ್ಯವನ್ನು ಖಾನಾಪುರಕ್ಕೆ ಬಿಟ್ಟುಕೊಡಬೇಕು : ಜಯಂತ ತಿನೇಕರ್

ಕಾರವಾರ: ಉತ್ತರ ಕನ್ನಡವನ್ನು ಪ್ರತಿನಿಧಿಸುವ ಸಂಸದ ಈ ಸಲ ಕೆನರಾ ಕ್ಷೇತ್ರದ ಪ್ರತಿನಿಧಿತ್ವವನ್ನು ಖಾನಾಪುರ ಕ್ಷೇತ್ರದವರಿಗೆ ಬಿಟ್ಟುಕೊಡಬೇಕು ಎಂದು ಸಮಾಜಿಕ ಕಾರ್ಯಕರ್ತ, ನಕಲಿ ಛಾಪಾ ಕಾಗದ ಹರಗಣ ಬಯಲಿಗೆ ಎಳೆದಿದ್ದ ಉದ್ಯಮಿ ಜಯಂತ ತಿನೇಕರ್ ಹೇಳಿದರು.
ಕಾರವಾರದ ಪತ್ರಿಕಾ ಭವನದಲ್ಲಿ ಬುಧುವಾರ ಸಂಜೆ ಪತ್ರಿಕಾಗೋಷ್ಠಿ ಮಾತನಾಡಿದರು.

ಕೆನರಾ ಲೋಕಸಭಾ ಕ್ಷೇತ್ರದ ಹಾಲಿ ಸಂಸದರನ್ನು ಅತೀ ಹೆಚ್ಚು ಮತ‌ನೀಡಿ ಖಾನಾಪುರದ ಮತದಾರರು ಗೆಲ್ಲಿಸಿದ್ದಾರೆ. ಈ ಸಲ ಲೋಕಸಭಾ ಸ್ಪರ್ಧಾಳುತನವನ್ನು ಖಾನಾಪುರ ದವರಿಗೆ ಕ ಬಿಟ್ಟುಕೊಡಿ ಎಂದು ಹಾಲಿ ಸಂಸದರಿಗೆ ಕೇಳಿದ್ದೇ‌ನೆ. ಈ ವಿಷಯದಲ್ಲಿ ನಿರ್ಧಾರ ಅವರಿಗೆ ಬಿಟ್ಟದ್ದು ಎಂದರು.
ಬಿಜೆಪಿ ಹೈ ಕಮಾಂಡ ಯಾರಿಗೆ ಟಿಕೆಟ್ ಕೊಡ್ತದೆ ನೋಡೋಣ ಎಂದರು‌ .

2004 ರಲ್ಲಿ ಎಲೆಕ್ಷನ್ ಗೆ ನಿಂತಿದ್ದೆ . ಅಲ್ಲಿಂದ ಇಲ್ಲಿ ತನಕ ಇಷ್ಟು ದಿನ ನಾನು ರಾಜಕೀಯ ದಿಂದ ದೂರ ಇದ್ದೆ ಎಂದ ಅವರು ಛಾಪಾ ಕಾಗದ ಹೊರಗೆ ತಂದಿದ್ದರಿಂದ
ದೇಶದ 30000 ಕೋಟಿ ರೂ. ಉಳಿಸಿದ್ದೇನೆ ಎಂದರು.
ತೆಲಿಗಿ ಪ್ರಕರಣ ಹೊರಗೆ ತಂದು ದಿ ಸ್ಟಾಂಪ್‌ ಪೇಪರ್ ಸ್ಕ್ಯಾಂಡಲ್ ಎಂಬ ಪುಸ್ತಕ ಬರೆದೆ. ಇನ್ನು ಮುಂದೆ ತೆಲಿಗಿ ಸಾವಿನ ನಂತರ ಈತನಕ ಎಂಬ ಪುಸ್ತಕ ಬರೆಯುವೆ ಎಂದು ಹೇಳಿದರು. ತೆಲಗಿ ಒಂದು ಮಾಧ್ಯಮ ಮಾತ್ರ. ಆ ಹಗರಣದ ಹಿಂದೆ ಕೆಲ ಕಾಂಗ್ರೆಸ್ಸಿಗರು ಇದ್ದಾರೆ ಎಂದ ಅವರು ಮಾಜಿ ಮುಖ್ಯ ಮಂತ್ರಿ ಎಸ್ .ಎಂ.ಕೃಷ್ಣ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆ ಸವಾಲನ್ನು ಎದುರಿಸಿದೆ ಎಂದರು. 2022 ರಲ್ಲಿ ನನ್ನ ಮೇಲೆ ಹಲ್ಲೆ ಯಾಯಿತು.ಆದರೂ ನಾ ಸತ್ಯ ಹೇಳುವುದನ್ನು ಬಿಟ್ಟಿಲ್ಲ ಎಂದು ತಿನೇಕರ್ ಹೇಳಿದರು.

ಒಂದು ಸುಳ್ಳು ಪದೇ ಪದೇ ಹೇಳುವ ಕಾರಣ , ಜನರು ಸುಳ್ಳುನ್ನು ಖರೆ ಎಂದು ನಂಬುತ್ತಾರೆ‌ .ಅದಕ್ಕೆ ಗೋಬೆಲ್ಸ ಟ್ರೂತ್ ಅಂತರಾ. ಐದು ಗ್ಯಾರಂಟಿ ಯೋಜನೆ ಕಾರಣ ವಿಕಾಸಕ್ಕೆ ಅವಕಾಶ ಇಲ್ಲದಂತಾಗಿದೆ. ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ ಎಂದು ಅವರು ವಿಷಾಧಿಸಿದರು‌. ಐದು ಗ್ಯಾರಂಟಿಗೆ 59 ಸಾವಿರ ಕೋಟಿ ಅಂದರೆ ಅಷ್ಟು ದೊಡ್ಡ ಮೊತ್ತ
ನಾನ್ ಪ್ರೋಡಕ್ಟ ಯೋಜನೆ ಎಂದು ಅವರು ಪ್ರತಿಪಾದಿಸಿದರು‌ .
ಐದು ಗ್ಯಾರಂಟಿ ಕಾರಣವಾಗಿ
ಜನ ಕಾಂಗ್ರೆಸ್ ಗೆ ಮತ ನೀಡಿ ಆರಿಸಿಕಳಿಸಿದ್ರು‌ . ಕಾಂಗ್ರೆಸ್ ಪ್ರತಿ ತಿಂಗಳು ಜನರಿಗೆ ಐದು ಗ್ಯಾರಂಟಿ ಕೊಡುತ್ತಿದೆ.
೧ ಕೋಟಿ ಜನರಗೆ ಅನುಕೂಲ ಅಂತಾರೆ ಎಂದು ರಾಜ್ಯಪಾಲರಿಂದ ಕಾಂಗ್ರೆಸ್ ಹೇಳಿಸಿದೆ. ಮಂತ್ರಿಗಳು ಸಹ ಸುಳ್ಳು ಹೇಳ್ತಿದಾರೆ. ಇದರಿಂದ ಜನರು ಬಡತನದಿಂದ ಮೇಲೆ ಬರಲು ಸಾಧ್ಯವಿಲ್ಲ. ಇಂದಿರಾ ಗಾಂಧಿ 20 ಅಂಶಗಳನ್ನು ಜಾರಿ ಮಾಡಿದರು. ಆದರೆ ಬಡತನ ಹೋಗಿಲ್ಲವಲ್ಲ ಎಂದರು.

ಲೋಕಸಭೆಯ 28 ಕ್ಷೇತ್ರ ಗೆಲ್ಲಲು ಐದು ಗ್ಯಾರಂಟಿ ಮುಂದುವರಿಸಿದ್ದಾರೆಂದು ತಿನೇಕರ್ ಅಪಾದಿಸಿದರು.
ನನ್ನ ತೆರಿಗೆ ನನ್ನ ಹಕ್ಕು ಅಂತಾರೆ.ಹತ್ತು ವರ್ಷದಿಂದ ಸಂಸತ್ ಸದಸ್ಯರಿದ್ದ ಡಿ.ಕೆ‌. ಸುರೇಶ ಸಂಸತ್ ನಲ್ಲಿ ಯಾಕ ಪ್ರಶ್ನೆ ಮಾಡಲಿಲ್ಲ ಎಂದು ಮರು ಪ್ರಶ್ನಿಸಿದರು‌ .

ಸಿದ್ದರಾಮಯ್ಯ 1.87 ಲಕ್ಷ ಕೋಟಿ ಬರಬೇಕು ಅಂತಿದ್ದಾರೆ.
2016-17 ರಲ್ಲಿ ಮುಖ್ಯ ಮಂತ್ರಿಯಾಗಿದ್ದಾಗ ಯಾಕ ಅನುದಾನ ತಾರತಮ್ಯ ವಿಷಯ ಎತ್ತಲಿಲ್ಲ ಎಂದ ತಿನೇಕರ್
ನನ್ನ ತೆರಿಗೆ ನನ್ನ ಹಕ್ಕು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಂತ್ರಗಾರಿಕೆ ಎಂದು ಆರೋಪಿಸಿದರು. ಇದು
ಮತ ಪಡೆಯುವ ತಂತ್ರಗಾರಿಕೆ ಎಂದು ತಿನೇಕರ್ ಹೇಳಿದರು.

ಪುಸ್ತಕ ಬರೆಯುವೆ :
ಛಾಪಾ ಕಾಗದ ಸ್ಕ್ಯಾಂಡಲ್ 2001 ಪುಸ್ತಕ ಬರೆದಿರುವೆ . ಮುಂದೆ ತೆಲಿಗಿ ಸಾವಿನ ನಂತರ ಈತನಕ ಪುಸ್ತಕ ಬರೆಯುವೆ . ಆ ಪುಸ್ತಕ ಅಗಸ್ಟನಲ್ಲಿ ಬೆಳಕು ಕಾಣಲಿದೆ. ಅದರಲ್ಲಿ ತೆಲಿಗೆ ಜೊತೆ ಲಿಂಕ್ ಇದ್ದ ಕಾಂಗ್ರೆಸ್ ನಾಯಕರ ಹೆಸರು ಬಯಲಿಗೆ ಎಳೆಯುವೆ ಎಂದರು‌.

Latest Indian news

Popular Stories