ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ 15 ನೇ ಬಜೆಟ್ ಮಂಡಿಸಿದರು. ಈ ಸಂದರ್ಭದಲ್ಲಿ ಕೇಂದ್ರ ವೈಫಲ್ಯ, ತೆರಿಗೆ ತಾರತಮ್ಯದ ಕುರಿತು ಪ್ರಸ್ತಾಪಿಸದರು.
ಈ ಸಂದರ್ಭದಲ್ಲಿ ಕೆರಳಿದ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿ ಬಜೆಟ್ ಮಂಡನೆಗೆ ಅಡ್ಡಪಡಿಸಲು ಯತ್ನಿಸಿದರು ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ಯಾವುದನ್ನು ಲೆಕ್ಕಿಸದೆ ತನ್ನಷ್ಟಕ್ಕೆ ಬಂಜೆಟ್ ಮಂಡಿಸುತ್ತ ಸಾಗಿದರು.
ಸ್ಪೀಕರ್ ಯುಟಿ ಕಾದರ್ ಬಿಜೆಪಿಗರನ್ನು ಸುಮ್ಮನಿರಲು ಹೇಳಿ ಬಜೆಟ್ ಮಂಡನೆಯ ನಂತರ ಪ್ರಶ್ನಿಸಿ ಎಂದರು. ಆದರೆ ಅದನ್ನು ಕೇಳದ ಬಿಜೆಪಿಗರು ಕೂಗಾಟ, ಧಿಕ್ಕಾರ ಮುಂದುವರಿಸಿದರು. ಸಿದ್ದರಾಮಯ್ಯ ಇದ್ಯಾವುದರ ಕಡೆ ಗಮನ ಹರಿಸಿದೆ ಬಜೆಟ್ ಮಂಡನೆ ಮುಂದುವರಿಸಿದರು. ನಂತರ ಬಿಜೆಪಿಗರು ತನ್ನಷ್ಟಕ್ಕೆ ಸುಮ್ಮನಾದರು.