ಎಲ್ ಕೆ ಜಿ ಸೇರುವ ಮಕ್ಕಳಿಗೆ ಕಡ್ಡಾಯವಾಗಿ ನಾಲ್ಕು ವರ್ಷ ಪೂರ್ಣವಾಗಬೇಕು | ಮೇ 27 ನೇ ತಾರೀಖಿನಿಂದ ನಲಿ ಕಲಿ ಆರಂಭ – ಶಿಕ್ಷಣ ಸಚಿವ ಮಧು ಬಂಗಾರಪ್ಪ

ಉಡುಪಿ: ಉಡುಪಿ ಜಿಲ್ಲೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಭೇಟಿ ನೀಡಿ ಎಸ್ ಎಸ್ ಎಲ್ ಸಿ ಪರೀಕ್ಷೆ ಗ್ರೇಸ್ ಮಾರ್ಕ್ ವಿಚಾರವಾಗಿ ಮಾತನಾಡಿದ ಅವರು, ” ಎರಡು ಮತ್ತು ಮೂರನೇ ಪೂರಕ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇರುವುದಿಲ್ಲ. 20 ಗ್ರೇಸ್ ಮಾರ್ಕ್ ಯಾವತ್ತೂ ಇರುತ್ತಾ ಎಂದು ಹಲವರಿಗೆ ಸಂಶಯ ಇದೆ.ಮುಂದಿನ ಬಾರಿ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಉಡುಪಿ ದಕ್ಷಿಣ ಕನ್ನಡ ಯಾವತ್ತೂ ಟಾಪರ್ಸ್ ಆಗಿ ಇರುತ್ತಿದ್ದರು. ನಂತರ ರಿಸಲ್ಟ್ ನಲ್ಲಿ ಇಳಿಮುಖವಾಯಿತು. ಈಗ ಮತ್ತೆ ಉಡುಪಿ, ಮಂಗಳೂರು ಟಾಪರ್ಸ್ ಆಗಿದೆ. ನಾವು ಪರೀಕ್ಷೆಯ ಪವಿತ್ರತೆಯನ್ನು ಉಳಿಸಿದ್ದೇವೆ. ಪರೀಕ್ಷೆಗಳ ಪವಿತ್ರತೆ ಉಳಿಸಲು 20 ಗ್ರೇಸ್ ಮಾರ್ಕ್ ನೀಡಲಾಗಿದೆ. ಅಗತ್ಯವಿದ್ದವರು ಎರಡು ಮತ್ತು ಮೂರನೇ ಪರೀಕ್ಷೆ ತೆಗೆದುಕೊಳ್ಳಬಹುದು. ಗ್ರೇಸ್ ಮಾರ್ಕ್ ಪಡೆದವರು ಕೂಡ ಮತ್ತೊಮ್ಮೆ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಹೇಳಿದರು.

ಗ್ರೇಸ್ ಮಾರ್ಕ್ ನೀಡಿರುವುದು ಈ ವರ್ಷಕ್ಕೆ ಮಾತ್ರವಾಗಿದೆ. ನಾವೀಗ ಎಲ್ಲಿದ್ದೇವೆ ಅನ್ನೋದು ಅರಿವಿಗೆ ಬಂದಿದೆ. ಇಲಾಖೆಯನ್ನು ಸಮರ್ಥವಾಗಿ ನಡೆಸಿಕೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನನಗೆ ನೀಡಿದ್ದಾರೆ. ಎರಡನೇ ಮತ್ತು ಮೂರನೇ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇರುವುದಿಲ್ಲ ಎಂದರು.

ಶಾಲೆ ಪುನಾರಾರಂಭ ವಿಚಾರವಾಗಿ ಮಾತನಾಡಿದ ಅವರು, ಪುಸ್ತಕಗಳು ಯುನಿಫಾರ್ಮ್ ಎಲ್ಲವೂ ಇದೆ. ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಸವಲತ್ತು ತಲುಪಲಿದೆ ಎಂದರು.

27 ನೇ ತಾರೀಖಿನಿಂದ ನಲಿ ಕಲಿ ಆರಂಭವಾಗುತ್ತೆ. ಈ ಬಾರಿ ಕೆ ಪಿ ಎಸ್ ಶಾಲೆಗಳು ಬರುತ್ತವೆ. ಕೆಪಿಎಸ್ ಶಾಲೆಗಳ ಬಗ್ಗೆ ನಮ್ಮ ಸರಕಾರ ಬದ್ಧತೆ ಹೊಂದಿದೆ. ಐನೂರು ಶಾಲೆಗಳನ್ನು ಇಡೀ ರಾಜ್ಯದ್ಯಂತ ತೆರೆಯುತ್ತೇವೆ ಎಂದು ಹೇಳಿದರು.

ಮುಂದಿನ ಮೂರು ವರ್ಷಗಳಲ್ಲಿ 3000 ಶಾಲೆ ತೆರೆಯುತ್ತೇವೆ. ಈ ಶೈಕ್ಷಣಿಕ ವರ್ಷದಿಂದ ಮುಂದಿನ ಮೂರು ವರ್ಷದೊಳಗೆ ಮೂರು ಸಾವಿರ ಕೆಪಿಎಸ್ ಶಾಲೆಗಳು ಆರಂಭ ಮಾಡಲಿದ್ದು ಕೆಪಿಎಸ್ ಶಾಲೆಗಳಿಗೆ ತುಂಬಾ ಬೇಡಿಕೆ ಇದೆ ಒಳ್ಳೆ ಫಲಿತಾಂಶ ಬರುತ್ತದೆ ಎಂದರು.

ಸಿಎಸ್ಆರ್ ಫಂಡ್ ನಿಂದ ಅನುದಾನ ವ್ಯವಸ್ಥೆ ಮಾಡಲಾಗುವುದು. ಡಿಸಿಎಂ ಡಿಕೆ ಶಿವಕುಮಾರ್ ಫಂಡ್ ಕಲೆಕ್ಷನ್ ಜವಾಬ್ದಾರಿ ವಹಿಸಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಮೂರರಿಂದ ಆರು ಶಾಲೆಗಳು ತೆರೆಯಲಿವೆ ಎಂದು ಹೇಳಿದರು.

ಎಲ್ ಕೆ ಜಿ ಸೇರುವ ಮಕ್ಕಳಿಗೆ ಕಡ್ಡಾಯವಾಗಿ ನಾಲ್ಕು ವರ್ಷ ಪೂರ್ಣವಾಗಬೇಕು. ಇದು ಕಾನೂನು.. ಈ ವಿಚಾರದಲ್ಲಿ ಸಡಲಿಕೆ ಸಾಧ್ಯವಿಲ್ಲ. ಆದೇಶವನ್ನು ನಾವು ಕಡ್ಡಾಯವಾಗಿ ಫಾಲೋ ಮಾಡುತ್ತೇವೆ. ವ್ಯತ್ಯಾಸ ಮಾಡಿದರೆ ಮಗು ಹುಟ್ಟಿದಾಗಲೇ ಶಾಲೆಗೆ ಸೇರಿಸಬೇಕಾಗುತ್ತದೆ. ಅಧ್ಯಯನದ ಮೂಲಕ ಈ ಕಾನೂನು ಮಾಡಿದ್ದಾರೆ ಎಂದು‌ ಹೇಳಿದರು.

Latest Indian news

Popular Stories