ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು

ಕೋಲ್ಕತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಜಾರಿಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಟಿಎಂಸಿ ಪಕ್ಷ ತನ್ನ ಎಕ್ಸ್‌ ಪೋಸ್ಟ್‌ನಲ್ಲಿಈ ವಿಚಾರ ತಿಳಿಸಿದ್ದು ”ನಮ್ಮ ನಾಯಕಿ ಮಮತಾ ಅವರಿಗೆ ಗಂಭೀರ ಗಾಯವಾಗಿದೆ. ದಯವಿಟ್ಟು ಅವರಿಗಾಗಿ ನೀವೆಲ್ಲ ಪ್ರಾರ್ಥನೆ ಸಲ್ಲಿಸಿ ” ಎಂದು ಪಶ್ಚಿಮ ಬಂಗಾಳದ ಆಡಳಿತ ಪಕ್ಷ ಪೋಸ್ಟ್ ಮಾಡಿದೆ.

ಆರಂಭಿಕ ವರದಿಗಳ ಪ್ರಕಾರ, ಮಮತಾ ಅವರ ಹಣೆಗೆ ದೊಡ್ಡ ಗಾಯವಾಗಿದ್ದು, ಫೋಟೋಗಳು ವೈರಲ್ ಆಗುತ್ತಿವೆ. ಮಮತಾ ಅವರು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಹಣೆಯ ಮಧ್ಯದಲ್ಲಿ ಆಳವಾದ ಗಾಯ ಮತ್ತು ಮುಖದ ಮೇಲೆ ರಕ್ತ ಹರಿದು ಬರುತ್ತಿರುವುದನ್ನು ಕಾಣಬಹುದಾಗಿದೆ.
ತಮ್ಮ ಕಾಲಿಘಾಟ್ ನಿವಾಸದ ಬಳಿ ಜಾರಿಬಿದ್ದರು ಎಂದು ವರದಿಯಾಗಿದೆ, ನಂತರ ಅವರನ್ನು ತತ್ ಕ್ಷಣವೇ ಅವರ ಪಕ್ಷದ ಕಾರ್ಯಕರ್ತರು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ.

Latest Indian news

Popular Stories