Featured StoryState News
ಎ.ಪಿ.ಸಿ.ಆರ್ ಕರ್ನಾಟಕ ವತಿಯಿಂದ “ಸುವರ್ಣ ನ್ಯೂಸ್” ದ್ವೇಷಪೂರಿತ ವರದಿಯ ವಿರುದ್ಧ ದೂರು

ಬೆಂಗಳೂರು: ಭಾರತದ ಹಿಂದೂಗಳ ಜನಸಂಖ್ಯೆ ತಿಳಿಸಲು ಭಾರತದ ಧ್ವಜ, ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕಿಸ್ತಾನದ ಧ್ವಜ ಬಳಸಿದ ಏಷ್ಯಾ ನೆಟ್ ಸುವರ್ಣ ನ್ಯೂಸ್ ವಿರುದ್ಧ ಎಪಿಸಿಆರ್ ಬೆಂಗಳೂರು ಅಸಿಸ್ಟೆಂಟ್ ಕಮಿಷನರ್’ಗೆ ದೂರು ಸಲ್ಲಿಸಿದೆ.
ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯು ಬಿಡುಗಡೆ ಮಾಡಿರುವ ಜನಸಂಖ್ಯಾ ವರದಿ ಕುರಿತ ಸುವರ್ಣ ನ್ಯೂಸ್ ನ ಅಜಿತ್ ಹನುಮಕ್ಕನವರ್ ನಿರ್ವಹಿಸುತ್ತಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಭಾರತದ ಧ್ವಜ ಹಿಂದೂಳಿಗೆ ರೂಪಕವಾಗಿ ಮತ್ತು ಪಾಕಿಸ್ತಾನದ ಧ್ವಜ ಮುಸ್ಲಿಮರಿಗೆ ರೂಪಕವಾಗಿ ಬಳಸಿತ್ತು.
ಇದೀಗ ಎಪಿಸಿಆರ್ ವತಿಯಿಂದ ಹೈಕೋರ್ಟ್ ವಕೀಲರಾದ ನಿಯಾಝ್ ಅವರು ದೂರು ಸಲ್ಲಿಸಿದ್ದಾರೆ. ಸುವರ್ಣ ನ್ಯೂಸ್ ಕೃತ್ಯಕ್ಕೆ ನಾಗರಿಕ ಸಮಾಜ ವ್ಯಾಪಕ ಆಕ್ರೋಶ ವ್ಯಕ್ತ ಪಡಿಸುತ್ತಿದೆ.
