ಬ್ಲಡ್ ಗ್ರೂಪ್ ಸಂಬಂಧಿ ಹೆರಿಗೆ ಸಮಸ್ಯೆ:  ಡಾ.ಸಮೀನಾ ಹರೂನ್ ನೇತೃತ್ವದ ತಂಡದಿಂದ ತಾಯಿ-ಮಗುವಿನ ರಕ್ಷಣೆ

ಮಂಗಳೂರು: ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯ ವೈದ್ಯೆ ಡಾ.ಸಮೀನಾ ಹಾರೂನ್ ನೇತೃತ್ವದ ವೈದ್ಯರ ತಂಡವು ವೈದ್ಯಕೀಯ ಪರಿಣತಿಯ ಗಮನಾರ್ಹ ಸಾಧನೆಯಲ್ಲಿ ಸವಾಲಿನ ಹೆರಿಗೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿ, ಅಂತಿಮವಾಗಿ ತಾಯಿ ಮತ್ತು ಮಗುವಿನ ಜೀವ ಉಳಿಸಿದೆ.

ನವೀನ ರೀತಿಯ “ಗರ್ಭಾಶಯದ ಟ್ರಾನ್ಸ್‌ಫ್ಯೂಷನ್” ವ್ಯವಸ್ಥೆಯನ್ನು ಬಳಸಿದ ಹೆರಿಗೆಯು ರಕ್ತದ ಗುಂಪು-ಸಂಬಂಧಿತ ಸಮಸ್ಯೆಗಳಿಂದ ಉಂಟಾಗುವ ತೊಡಕುಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದೆ.

ಪುಣೆ ಮೂಲದ ಗರ್ಭಿಣಿಯೊಬ್ಬರು ಬ್ಲಡ್ ಗ್ರೂಪ್ ಸಂಬಂಧಿಸಿ ಸಮಸ್ಯೆಯಿಂದಾಗಿ ಹೆರಿಗೆಯಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿ ಪರಿಸ್ಥಿತಿಯಲ್ಲಿ 3ನೆ ಹೆರಿಗೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ವೈದ್ಯರ ತಂಡ ಯಶಸ್ವಿಯಾಗಿ ಹೆರಿಗೆ ನಡೆಸಿ ತಾಯಿ – ಮಗುವನ್ನು ರಕ್ಷಿಸಿದೆ.

“ಆ ಮಹಿಳೆಯ 2ನೇ ಮಗು ಅದಾಗಲೇ ಇಂತಹ ಸಮಸ್ಯೆಯಿಂದ ಸಾವಿಗೀಡಾಗಿದ್ದ ಕಾರಣ, ಈ ಹೆರಿಗೆ ಕ್ಲಿಷ್ಟಕರವಾಗಿತ್ತು. ಹಾಗಿದ್ದರೂ ನಮ್ಮ ತಂಡದ ಇತರ ವೈದ್ಯರಾದ ಡಾ.ಶಮೀ ಶಾಸ್ತ್ರಿ ಡಾ.ಪುಂಡಲೀಕ ಬಾಳಿಗಾ ಹಾಗೂ ಡಾ.ಮರಿಯಾ ಬೊಕೆಲೋ ಅವರ ಸಹಕಾರದಲ್ಲಿ ಆಸ್ಪತ್ರೆಯಲ್ಲಿ ಲಭ್ಯವಿರುವ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಹೆರಿಗೆಯನ್ನು ಸುರಕ್ಷಿತವಾಗಿ ನಡೆಸಿದ ಖುಷಿ ಇದೆ’ ಎಂದು ಡಾ.ಸಮೀನ ಮಾಧ್ಯಮದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

Latest Indian news

Popular Stories