ಸುನಿಲ್ ಶರ್ಮಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಜೈಪುರ ಅಭ್ಯರ್ಥಿ ಬದಲಿಸಿದ ಕಾಂಗ್ರೆಸ್

ಹೊಸದಿಲ್ಲಿ : ಅಂತರ್ಜಾಲದಲ್ಲಿ ದ್ವೇಷ ಹರಡುವ ಕೆಲಸ ಮಾಡುತ್ತಿರುವ thejaipurdialogues.com ನ ಪಾಲುದಾರ ಹಾಗೂ ನಿರ್ದೇಶಕ ಸುನಿಲ್ ಶರ್ಮಾಗೆ ನೀಡಿದ್ದ ಜೈಪುರ ಲೋಕಸಭಾ ಕ್ಷೇತ್ರದ ಟಿಕಟನ್ನು ಬದಲಾಯಿಸಿ ಇದೀಗ ಪ್ರತಾಪ್ ಸಿಂಗ್ ಖಚರಿಯಾವಾಸ್ ಅವರಿಗೆ ಜೈಪುರ ಕ್ಷೇತ್ರದ ಲೋಕಸಭಾ ಟಿಕೆಟ್‌ ನೀಡಿ ಪಕ್ಷವು ಆದೇಶ ಹೊರಡಿಸಿದೆ.

ಧರ್ಮ ದ್ವೇಷ, ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕುತ್ತಿದ್ದ thejaipurdialogues.com ನ ಪಾಲುದಾರ ಹಾಗೂ ನಿರ್ದೇಶಕ ಸುನಿಲ್ ಶರ್ಮಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಶಶಿ ತರೂರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಕಾಂಗ್ರೆಸ್ ಎಚ್ಚೆತ್ತು ಟಿಕೆಟ್ ಬದಲಿಸಿದೆ.

Latest Indian news

Popular Stories