ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ನಕಲಿ ಹೇಳಿಯುಳ್ಳ ಪೋಸ್ಟ್‌ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಗೋವಾ ಮೂಲದ ಭಿಕುಮಾತ್ರೆ ಎಂಬ ಆರೋಪಿ ಎಂದು ಗುರುತಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತಿರುಚಿ, ಎರಡು ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಹೇಳಿಕೆಯುಳ್ಳು ಪೋಸ್ಟ್‌ಅನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಮಾತ್ರವಲ್ಲದೆ, ಆರೋಪಿ ಬಿಕುಮಾತ್ರೆ ಏಪ್ರಿಲ್ 22 ರಂದು ತನ್ನ ಟ್ವಿಟರ್ ಖಾತೆಯಲ್ಲಿ, “ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಎಂಬುದನ್ನು ಉಲ್ಲೇಖಿಸಿಲ್ಲ. ವಿಶೇಷವಾಗಿ ಇದು ಎಸ್ಸಿಇ/ಎಸ್ಟಿಗಳನ್ನೂ ಒಳಗೊಂಡಿದೆ ಎಂದು ವಾದಿಸುವವ ಮುಖಕ್ಕೆ ಇದನ್ನು ಎಸೆಯಿರಿ” ಎಂಬ ಹೇಳಿಕೆಯ ಜೊತೆಗೆ, ವಿಡಿಯೋವೊಂದನ್ನು ಹಂಚಿಕೊಂಡಿದ್ದ. ಅಲ್ಲದೆ, ತನ್ನ ಪೋಸ್ಟ್‌ಅನ್ನು ಡಿಲೀಟ್ ಕೂಡ ಮಾಡಿದ್ದ
ಆತನ ಪೋಸ್ಟ್ ವಿರುದ್ಧ ಬೆಂಗಳೂರಿನ ನಿವಾಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತ ಜೆ ಸರವಣನ್ ಎಂಬವರು ಏಪ್ರಿಲ್ 29ರಂದು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ವಿರುದ್ಧ ಸೆಕ್ಷನ್ 153 (ಎ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66 (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ, ಆರೋಪಿಯನ್ನು ಬಂಧಿಸಿದ್ದಾರೆ.