ಹೆಚ್ಚು ಮಕ್ಕಳಿರುವವರಿಗೆ ಕಾಂಗ್ರೆಸ್ ನಿಮ್ಮ ಸಂಪತ್ತನ್ನು ಹಂಚಲಿದೆ: ಮುಸ್ಲಿಮರನ್ನು ಉಲ್ಲೇಖಿಸಿ ರಾಜಸ್ಥಾನದಲ್ಲಿ ಪ್ರಧಾನಿ ಮೋದಿಯಿಂದ ವಿವಾದಾತ್ಮಕ ಭಾಷಣ

ಜೈಪುರ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿ ವಿವಾದ ಸೃಷ್ಟಿಸಿದ್ದಾರೆ.

ದೇಶದ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮೊದಲ ಹಕ್ಕು ಇದೆ ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಅವರ ಭಾಷಣದಲ್ಲಿ ಮುಸ್ಲಿಮರನ್ನು “ಗುಸ್ಪೇಟಿಯೆ” ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವ ಜನರೆಂದು ಉಲ್ಲೇಖಿಸಿದರು. ಈ ಹಿಂದೆ, ತಮ್ಮ (ಕಾಂಗ್ರೆಸ್) ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಅವರು ಹೇಳಿದ್ದರು. ಇದರರ್ಥ ಈ ಆಸ್ತಿಯನ್ನು ಯಾರಿಗೆ ಹಂಚಲಾಗುತ್ತದೆ? ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ವಿತರಿಸಲಾಗುವುದು,” ಎಂದು ಹೇಳಿದರು.

Latest Indian news

Popular Stories