ಕಲುಷಿತ ಆಯುವೇರ್ದಿಕ್ ಸಿರಪ್ ಸೇವನೆ – 5 ಮಂದಿ ಮೃತ್ಯು

ಗುಜರಾತ್:ಖೇಡಾ ಜಿಲ್ಲೆಯಲ್ಲಿ ಮಿಥೈಲ್ ಆಲ್ಕೋಹಾಲ್ ಹೊಂದಿರುವ ಕಲುಷಿತ ಆಯುರ್ವೇದಿಕ್ ಸಿರಪ್ ಸೇವಿಸಿದ ಶಂಕೆಯಿಂದ ಕಳೆದ ಎರಡು ದಿನಗಳಲ್ಲಿ ಕನಿಷ್ಠ ಐದು ಜನರು ಮೃತಪಟ್ಟಿದ್ದಾರೆ. ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲ್ಮೇಘಸವ್- ಅಸವ ಅರಿಷ್ಟ ಎಂಬ ಹೆಸರಿನ ಆಯುರ್ವೇದಿಕ್ ಸಿರಪ್ ಅನ್ನು ಬಿಲೋದರ ಗ್ರಾಮದ ಅಂಗಡಿಯಾತ ಕೌಂಟರ್‌ನಲ್ಲಿ ಸುಮಾರು 50 ಜನರಿಗೆ ಮಾರಾಟ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಗ್ರಾಮಸ್ಥರೊಬ್ಬರ ರಕ್ತದ ಮಾದರಿ ವರದಿಯು ಸಿರಪ್‌ಗೆ ಮಿಥೈಲ್ ಆಲ್ಕೋಹಾಲ್ ಅನ್ನು ಮಾರಾಟ ಮಾಡುವ ಮೊದಲು ಸೇರಿಸಿರುವುದು ದೃಢಪಟ್ಟಿದೆ ಎಂದು ಖೇಡಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗಧಿಯಾ ಹೇಳಿದ್ದಾರೆ.

ಹೆಚ್ಚಿನ ವಿಚಾರಣೆಗಾಗಿ ನಾವು ಅಂಗಡಿ ವ್ಯಾಪಾರಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

Latest Indian news

Popular Stories