ವಿವಾದಾತ್ಮಕ ಪೋಸ್ಟ್ : ತಮಿಳಿಗರ ಕ್ಷಮೆಯಾಚಿಸಿದ ಶೋಭಾ ಕರಂದ್ಲಾಜೆ

ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ ಇದೀಗ ಟ್ವೀಟ್ ಮಾಡಿ ತಮಿಳಿಗರ ಕ್ಷಮೆಯಾಚಿಸಿದ್ದಾರೆ. ಅವರು ಈಮುಂಚೆ ಟ್ವೀಟ್ ವೊಂದನ್ನು ಮಾಡಿ ವಿವಾದ ಸೃಷ್ಟಿಸಿದ್ದರು. ಇದೀಗ ವಿವಾದದಿಂದ ಬಿಜೆಪಿಗೆ ಮುಜುಗರ ಸೃಷ್ಟಿಯಾಗಿದ್ದು ಮುಜುಗರದಿಂದ ಹೊರ ಬರಲು ತಮಿಳಿಗರ ಕ್ಷಮೆಯಾಚಿಸಿದ್ದಾರೆ.

ಶೋಭಾ ಕರಂದ್ಲಾಜೆ ಎಕ್ಸ್ ಪೋಸ್ಟ್ ನಲ್ಲಿ, ” ನನ್ನ ತಮಿಳು ಸಹೋದರ ಸಹೋದರಿಯರಿಗೆ,
ನನ್ನ ಮಾತುಗಳು ನೆರಳುಗಳನ್ನು ಹಬ್ಬಲು ಅಲ್ಲ ಬದಲಾಗಿ ಬೆಳಕನ್ನು ಬೆಳಗಿಸಲು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೂ ನನ್ನ ಟೀಕೆಗಳು ಕೆಲವರಿಗೆ ನೋವು ತಂದಿರುವುದನ್ನು ನಾನು ಗಮನಿಸಿರುತ್ತೇನೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಮಾತುಗಳು ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರಿಗೆ ಮಾತ್ರವಾಗಿದೆ”.

ನನ್ನ ಮಾತು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದ್ದಾಗಿದೆ. ತಮಿಳುನಾಡಿನವರಿಗೆ ನೋವುಂಟಾಗಿದ್ದರೆ ನನ್ನ ಹೃದಯದ ಆಳದಿಂದ, ನಾನು ನಿಮ್ಮ ಕ್ಷಮೆಯನ್ನು ಕೇಳುತ್ತೇನೆ. ಇದಲ್ಲದೆ, ನಾನು ನನ್ನ ಹಿಂದಿನ ಕಾಮೆಂಟ್‌ಗಳನ್ನು ಹಿಂತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಕುರಿತಾದ ಪೋಸ್ಟ್ ನಲ್ಲಿ ತಮಿಳುನಾಡಿನ ಕುರಿತು ವಿವಾದಾತ್ಮಕವಾಗಿ ಹೇಳಿಕೆ ನೀಡಿದ ಕಾರಣ ತಮಿಳುಗಾರು ಆಕ್ರೋಶ ವ್ಯಕ್ತಪಡಿಸಿದ್ದರು.

Latest Indian news

Popular Stories