ದೆಹಲಿ ಜಾಮಿಯಾ ಮಿಲ್ಲೀಯಾ ವಿವಿ ಎಲ್‌ಎಲ್‌ಎಂ (LLM) ಪ್ರವೇಶ ಪರೀಕ್ಷೆ: ಮಂಗಳೂರಿನ ನಿಹಾಲ್‌ಗೆ 7ನೇ ರ‍್ಯಾಂಕ್

ದೆಹಲಿಯ ಪ್ರತಿಷ್ಠಿತ ಜಾಮಿಯಾ ಮಿಲ್ಲೀಯಾ ಇಸ್ಲಾಮಿಯಾ(ಜೆಎಂಐ) ಕೇಂದ್ರೀಯ ವಿಶ್ವವಿದ್ಯಾಲಯ ನಡೆಸಿದ ಎಲ್‌ಎಲ್‌ಎಂ ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ನಿಹಾಲ್ ಮುಹಮ್ಮದ್ ರಾಷ್ಟ್ರಮಟ್ಟದಲ್ಲಿ ಏಳನೇ ರ‍್ಯಾಂಕ್ ಪಡೆದಿದ್ದು, ಸರಕಾರಿ ಕೋಟಾದ ಸೀಟ್‌ಗೆ ಆಯ್ಕೆಯಾಗಿದ್ದಾರೆ.

ಮಂಗಳೂರು ನಗರದ ಕುದ್ರೋಳಿಯ ನಿವಾಸಿಯಾಗಿರುವ ಅಬ್ದುಲ್ ನಿಝಾರ್ ಹಾಗೂ ಖಾಲಿಸ ನಿಝಾರ್ ಅವರ ಸುಪುತ್ರರಾಗಿರುವ ನಿಹಾಲ್ ಮುಹಮ್ಮದ್, ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. ಆ ಬಳಿಕ ಕೇರಳದ ಮಲಪ್ಪುರಂನಲ್ಲಿರುವ ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಘಟಕ ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಪಡೆದಿದ್ದರು.

ಸ್ನಾತಕೋತ್ತರ ಪದವಿ ಪಡೆಯಲು ಜಾಮಿಯಾ ಮಿಲ್ಲೀಯಾ ಇಸ್ಲಾಮಿಯಾ ನಡೆಸಿದ್ದ ಪ್ರವೇಶ ಪರೀಕ್ಷೆ ಬರೆದಿದ್ದು, ಇದರಲ್ಲಿ ರಾಷ್ಟ್ರಮಟ್ಟದಲ್ಲಿ ಏಳನೇ ರ‍್ಯಾಂಕ್ ಪಡೆದಿದ್ದಾರೆ. ನಿಹಾಲ್ ಮುಹಮ್ಮದ್ ಅವರು, ವಿದ್ಯಾರ್ಥಿ ಸಂಘಟನೆಯಾಗಿರುವ ಸ್ಟೂಡೆಂಟ್ಸ್‌ ಇಸ್ಲಾಮಿಕ್ ಆರ್ಗನೈಝೇಷನ್(ಎಸ್ಐಓ)ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದರು. ದಿ ಹಿಂದುಸ್ತಾನ್ ಗಝೆಟ್ ಇಂಗ್ಲಿಷ್ ಆವೃತ್ತಿಯಲ್ಲೂ ಸೇವೆ ಸಲ್ಲಿಸಿದ್ದಾರೆ.

Latest Indian news

Popular Stories