ಪ್ರಸಾದ ಕದ್ದು ತಿಂದ ಆರೋಪ | ವಿಕಲಚೇತನ ವ್ಯಕ್ತಿಯ ಮೇಲೆ ಗುಂಪು ಹಲ್ಲೆ – ಮೃತ್ಯು

ದೆಹಲಿ: ಗಣಪತಿ ಸ್ಟಾಲ್ ವೊಂದರಿಂದ ಪ್ರಸಾದ ಕದ್ದು ಸೇವಿಸಿದ ಆರೋಪದ ಮೇಲೆ ವಿಕಲಚೇತನ ಮುಸ್ಲಿಂ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪರಿಣಾಮ ಮೃತಪಟ್ಟಿರುವ ದೆಹಲಿಯ ಸುಂದರ್ ನಗರಿ ಪ್ರದೇಶದಲ್ಲಿ ಮಂಗಳವಾರ(ಸೆ.26 ರಂದು) ನಡೆದಿರುವುದು ವರದಿಯಾಗಿದೆ.

ವಿಕಲಚೇತನ ಆಗಿರುವ ಮೊಹಮ್ಮದ್ ಇಸಾರ್ ಎಂಬಾತ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ ಎನ್ನುವ ಕಾರಣಕ್ಕೆ ಕೆಲ ವ್ಯಕ್ತಿಗಳು ಇಸಾರ ನನ್ನು ಹಿಡಿದು ಕಂಬಕ್ಕೆ ಕಟ್ಟಿದ್ದಾರೆ. ಆ ಬಳಿಕ ಆತನನ್ನು ಥಳಿಸಿದ್ದಾರೆ. ಏಟು ತಿಂದ ಪರಿಣಾಮ ಕೆಲ ಸಮಯದ ಬಳಿಕ ಇಸಾರ್‌ ಮೃತಪಟ್ಟಿದ್ದಾನೆ.

ಈ ಸಂಬಂಧ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಗುಂಪೊಂದು ವ್ಯಕ್ತಿಯನ್ನು ಕೋಲುಗಳಿಂದ ಹಲ್ಲೆ ಮಾಡುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ಸಂಬಂಧ ಪೊಲೀಸರು ಕೆಲ ವ್ಯಕ್ತಿಗಳನ್ನು ಬಂಧಿಸಿದ್ದು, ಮೊಬೈಲ್‌ ನಲ್ಲಿ ಚಿತ್ರೀಕರಿಸುತ್ತಿದ್ದವರನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದ್ದಾರೆ. ಸದ್ಯ ಅಹಿತಕರ ಘಟನೆ ನಡೆಯದಂತೆ ಘಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Latest Indian news

Popular Stories