ಹೊಸದಿಲ್ಲಿ: 2020ರ ಗಲಭೆಗಳ ತನಿಖೆಗೆ ಸಂಬಂಧಿಸಿದಂತೆ ದಿಲ್ಲಿಯ ನ್ಯಾಯಾಲಯ ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವುದು ಇದೇ ಮೊದಲೇನು ಅಲ್ಲ. ಕರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಆಗಸ್ಟ್ 24 ರಂದು ಆರೋಪಿಯೊಬ್ಬನನ್ನು ಖುಲಾಸೆಗೊಳಿಸಿದ್ದಾರೆ. ಗಲಭೆಯಲ
ಗಲಭೆಯಲ್ಲಿ ಜನಸಮೂಹದ ಒಳಗೊಳ್ಳುವಿಕೆಯ ಬಗ್ಗೆ ಪೊಲೀಸರು “ಕೃತಕ ಹೇಳಿಕೆಗಳನ್ನು” ನೀಡುತ್ತಿದ್ದಾರೆ. “ಯಾಂತ್ರಿಕ ರೀತಿಯಲ್ಲಿ” ಅನೇಕ ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದ್ದಾರೆ ಮತ್ತು ಘಟನೆಗಳ ಬಗ್ಗೆ ಸರಿಯಾದ ತನಿಖೆ ನಡೆಸದಿರುವುದನ್ನು ಉಲ್ಲೇಖಿಸಿರುವುದಾಗಿ ಲೈವ್ ಲಾ ವರದಿ ಮಾಡಿದೆ.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರಾದ ಪ್ರಮಾಚಲ ಅವರು ತನಿಖಾಧಿಕಾರಿ ಮತ್ತು ಕಾನ್‌ಸ್ಟೆಬಲ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.. ಖುಲಾಸೆಗೊಂಡಿರುವ ಜಾವೇದ್ ಅವರು ಗಲಭೇಯ ಸಂದರ್ಭದಲ್ಲಿ ಉಪಸ್ಥಿತಿಯನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. ಪ್ರಕರಣದ ಕುರಿತು ಇಬ್ಬರೂ ಪರಸ್ಪರ ವಿರುದ್ಧವಾದ ವಿವರಣೆಯನ್ನು ನೀಡಿದ್ದಾರೆ ಎಂದು ನ್ಯಾಯಾಲಯ ಬೆಳಕು ಚೆಲ್ಲಿದೆ.
“ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಘಟನೆಗಳಲ್ಲಿ ಆರೋಪಿ ಜಾವೇದ್ ಭಾಗಿಯಾಗಿರುವ ಬಗ್ಗೆ ಅರಿಯುವ ಮುನ್ನವೇ ತನಿಖಾಧಿಕಾರಿ ಬಹುಶಃ ಕೃತಕ ಹೇಳಿಕೆ ನೀಡುತ್ತಿದ್ದರು. Ct ಎಂದು ಅವರು ಮೊದಲು ಹೇಳಿಕೊಳ್ಳಲು ಅದು ಕಾರಣವಾಗಿರಬಹುದು. 27.02.2020 ರಂದು ಜಾವೇದ್ ಭಾಗಿಯಾಗಿರುವ ಬಗ್ಗೆ ಪವನ್/ಪಿಡಬ್ಲ್ಯೂ9 ಅವರಿಗೆ ತಿಳಿಸಿದ್ದರು. ಆದರೆ ಎಫ್‌ಐಆರ್‌ನಲ್ಲಿ ಜಾವೇದ್ ಹೆಸರನ್ನು ನಮೂದಿಸದಿರಲು ಕಾರಣಗಳ ಬಗ್ಗೆ ಅವರು ಹೇಳಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಜಾವೇದ್ ವಿರುದ್ಧ ಸಶಸ್ತ್ರ ಗಲಭೆ, ಕಾನೂನುಬಾಹಿರ ಸಭೆ ಮತ್ತು ಕಿಡಿಗೇಡಿತನ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಏಳು ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.
ನ್ಯಾಯಾಧೀಶರು ವಿಷಯವನ್ನು ಸಂಬಂಧಪಟ್ಟ ಠಾಣಾಧಿಕಾರಿಗೆ ಹಿಂತಿರುಗಿಸಿದ್ದಾರೆ.
“ಘಟನೆಗಳನ್ನು ಸರಿಯಾಗಿ ತನಿಖೆ ಮಾಡದೆಯೇ ಈ ಪ್ರಕರಣದಲ್ಲಿ ಯಾಂತ್ರಿಕ ರೀತಿಯಲ್ಲಿ ಬಹು ಘಟನೆಗಳಿಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸೆಕ್ಷನ್ 436 IPC ಅಡಿಯಲ್ಲಿ ಅಪರಾಧದ ಯಾವುದೇ ಪುರಾವೆಗಳಿಲ್ಲ [ಬೆಂಕಿ ಅಥವಾ ಮನೆಯನ್ನು ನಾಶಮಾಡುವ ಉದ್ದೇಶದಿಂದ ಸ್ಫೋಟಕ ವಸ್ತುವಿನಿಂದ ಕಿಡಿಗೇಡಿತನ] ಮತ್ತು ಅಂತಹ ಸೆಕ್ಷನ್ ಅನ್ನು ಸಹ ನೈಜ ಪರಿಸ್ಥಿತಿಯನ್ನು ಖಚಿತಪಡಿಸಿಕೊಳ್ಳದೆ ಅನ್ವಯಿಸಲಾಗಿದೆ”ಎಂದು ನ್ಯಾಯಾಲಯ ಹೇಳಿದೆ.
ಆರ್‌ಪಿ ಪಬ್ಲಿಕ್ ಸ್ಕೂಲ್ ಬಳಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಸಲ್ಮಾನ್ ಎಂಬಾತ ತನ್ನ ಮೇಲೆ ಮೂವರು ಹುಡುಗರು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದ್ದರು. ಇಲ್ಲಿ ಆರೋಪಿಗಳು ಮೂವರು ಹುಡುಗರು ಎಂದು ಸ್ಪಷ್ಟವಾಗಿ ನಮೂದಿಸಿರುವುದರಿಂದ ಈ ಪ್ರಕರಣವನ್ನು ಗಲಭೆಯ ಗುಂಪಿನೊಂದಿಗೆ ಸೇರಿಸಿದ್ದಕ್ಕಾಗಿ ನ್ಯಾಯಾಲಯವು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು.
ಹಿಂಸಾಚಾರದಲ್ಲಿ ತಮ್ಮ ಅಂಗಡಿಗಳನ್ನು ನಾಶಪಡಿಸಲಾಗಿದೆ ಎಂದು ಮುಜಾಹಿದ್ ಮತ್ತು ಜಮೀರ್ ಎಂಬ ಇಬ್ಬರು ವ್ಯಕ್ತಿಗಳು ದೂರಿನೊಂದಿಗೆ ಈ ಎಫ್‌ಐಆರ್ ಅನ್ನು ಸೇರಿಸಿದ್ದಾರೆ. “ಘಟನೆಯ ಸ್ಥಳದ ಸಾಮೀಪ್ಯದ ನೆಪದಲ್ಲಿ” ತನಿಖೆಯನ್ನು ಎಫ್‌ಐಆರ್‌ನಲ್ಲಿ ಅಕ್ರಮವಾಗಿ ಸೇರಿಸಲಾಗಿದೆ ಎಂದು ನ್ಯಾಯಾಧೀಶರು ಈ ಹಿಂದೆ ಹೇಳಿದ್ದರು.
ಪದೇ ಪದೇ ದೆಹಲಿಯ ವಿವಿಧ ನ್ಯಾಯಾಲಯಗಳು ದೆಹಲಿ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೋಲೀಸರ ಕಳಪೆ ತನಿಖೆಯ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.