ಮುಂಬಯಿ: ಖ್ಯಾತ ಯೂಟ್ಯೂಬರ್ ಧ್ರುವ್ ರಥೀ ಇತ್ತೀಚೆಗೆ ಹಾಕಿರುವ ವಿಡಿಯೋ ರಾಜಕೀಯವಾಗಿ ಸಂಚಲನ ಸೃಷ್ಟಿಸಿದೆ. ಅವರ ಈ ಜಾಗೃತಿ ವೀಡಿಯೋ ಭಾರೀ ವೈರಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ವೈಯಕ್ತಿಕ ದಾಳಿಗಳು ನಡೆಯುತ್ತಿದೆ ಧ್ರುವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಸಂಪೂರ್ಣವಾಗಿ ವಿಡಿಯೋ ನೋಡಿ ಎಂದು ಮನವಿ ಮಾಡಿದ್ದಾರೆ.
ʼಭಾರತದಲ್ಲಿ ಸರ್ವಾಧಿಕಾರ ʼ ಎನ್ನುವ ಹೆಡ್ಡಿಂಗ್ ಕೊಟ್ಟಿರುವ ವಿಡಿಯೋ ಮೂರೇ ದಿನದಲ್ಲಿ 11 ಮಿಲಿಯನ್ ವೀಕ್ಷಣೆ ಕಂಡಿದೆ. ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ಭಾರತ ಸರ್ವಾಧಿಕಾರದತ್ತ ವಾಲುತ್ತಿರುವ ಕುರಿತು ಗಂಭೀರ ಅಂಶಗಳನ್ನು ಈ ವೀಡಿಯೋದಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದೆ. ಹಲವು ರಾಜಕೀಯ ಮುಖಂಡರು ಇದನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಧ್ರುವ್ ರಥೀ ಕೆಲವೊಂದಿಷ್ಟು ಉದಾಹರಣೆಯನ್ನು ಕೊಟ್ಟು ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ಬಿಜೆಪಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಯೂಟ್ಯೂಬರ್ ಧ್ರುವ್ ರಥೀ ತನ್ನ ವಿಡಿಯೋಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಅವರ ಕೆಲವೊಂದು ವಿಡಿಯೋಗಳು ವಿವಾದವನ್ನು ಸೃಷ್ಟಿಸಿದ್ದುಂಟು. ಈ ವಿಡಿಯೋದಲ್ಲಿ ಮೋದಿ ಅವರ ಸರ್ಕಾರದ ಬಗ್ಗೆ ಹೇಳುತ್ತಾ, ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಭಾರತ ಸರ್ಕಾರವನ್ನು ಸರ್ವಾಧಿಕಾರಿಯಂತೆ ಉತ್ತರ ಕೊರಿಯಾ ಸರ್ಕಾರದೊಂದಿಗೆ ಹೋಲಿಸಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ಕೊನೆಗೊಂಡಿದೆಯೇ ಎನ್ನುವ ಅಂಶದ ಬಗ್ಗೆ ವಿಡಿಯೋದಲ್ಲಿ ಅವರು ಮಾತನಾಡಿದ್ದಾರೆ. ದೇಶದ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ ಕೇಂದ್ರದ ಕೈಗೊಂಬೆಯಂತಿದೆ. ಸರ್ಕಾರ ಅದನ್ನು ತನಗೆ ಬೇಕಾದಂತೆ ಇತರೆ ಪಕ್ಷದ ನಾಯಕರ ವಿರೋಧ ದಾಳಿ ನಡೆಸಲು ಬಳಸುತ್ತಿದೆ ಎನ್ನುವುದನ್ನು ಕೆಲ ಘಟನೆಯ ಉದಾಹರಣೆಯನ್ನು ಕೊಟ್ಟು ಹೇಳಿದ್ದಾರೆ. ಇನ್ನು ದೇಶದ ಚುನಾವಣೆ ಆಯೋಗದ ಬಗ್ಗೆಯೂ ಕೆಲವೊಂದು ವಿಚಾರಗಳನ್ನು ಮುಂದಿಟ್ಟಿದ್ದಾರೆ.
ರೈತರ ಪ್ರತಿಭಟನೆ ಹಾಗೂ ಚಂಡಿಗಢ ಮೇಯರ್ ಚುನಾವಣೆಯ ಬಗ್ಗೆಯೂ ವಿಡಿಯೋದಲ್ಲಿ ಹೇಳಲಾಗಿದೆ. ತಾನು ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ಮಾತನಾಡಿಲ್ಲ. ವಾಸ್ತವ ಸಂಗತಿಗಳನ್ನು ಮಾತ್ರ ಹೇಳಿದ್ದೇನೆ ಎಂದು ಧ್ರುವ್ ಹೇಳಿದ್ದಾರೆ.
ವೀಡಿಯೋ: