ಕೇಂದ್ರೀಯ ವಿಶ್ವವಿದ್ಯಾನಿಲಯ, ಕರ್ನಾಟಕದ ರಿಜಿಸ್ಟ್ರಾರ್ ರಿಂದ ವಿವಾದಿತ ಪತ್ರ; ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆ

ಕೇಂದ್ರೀಯ ವಿಶ್ವವಿದ್ಯಾನಿಲಯ, ಕರ್ನಾಟಕದ ರಿಜಿಸ್ಟ್ರಾರ್ ಅವರು ಹೊರಡಿಸಿದ ಪತ್ರದ ಪ್ರಕಾರ, ಕರ್ನಾಟಕ ಸರ್ಕಾರದಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳಾದ ಸಂಪುಟ ಸಚಿವ , ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು (ಸಂಪುಟ ದರ್ಜೆ), ಕರ್ನಾಟಕ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿ ಭಾರತೀಯ ಸಂವಿಧಾನದ 75 ವರ್ಷಗಳ ಕುರಿತು ಚರ್ಚಿಸುವ ಮೂಲಕ “ಶೈಕ್ಷಣಿಕ ಸಮಗ್ರತೆಗೆ” ಅಪಾಯವನ್ನುಂಟು ಮಾಡುವ ಮತ್ತು ಕ್ಯಾಂಪಸ್‌ಗೆ “ಭದ್ರತಾ ಬೆದರಿಕೆ”ಯನ್ನೂ ಸಹ ಉಂಟುಮಾಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದು ಕರ್ನಾಟಕ ಸರ್ಕಾರ ಮತ್ತು ಅದರ ಪ್ರತಿನಿಧಿಗಳಿಗೆ ಮಾಡಿದ ಅವಮಾನ. ಈ ಹೇಳಿಕೆಗೆ ಸಂಬಂಧಿಸಿದಂತೆ ರಿಜಿಸ್ಟ್ರಾರ್ ಮತ್ತು ಉಪಕುಲಪತಿಗಳು ರಾಜ್ಯ ಸರ್ಕಾರಕ್ಕೆ ವಿವರಣೆಯನ್ನು ನೀಡಬೇಕಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ವಿವಾದಿತ ಪತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಬಿ.ಆರ್ ಪಾಟೀಲ್ ಮತ್ತು ಫೌಝಿಯಾ ತರನುಮ್ ಅವರ ಕುರಿತು ಉಲ್ಲೇಖಿಸಲಾಗಿದೆ.

Latest Indian news

Popular Stories