ಗಾಂಧೀಜಿ – ಶಾಸ್ತ್ರೀಜಿ ಜಯಂತಿ: ತ್ಯಾಜ್ಯ ಪ್ಲಾಸ್ಟಿಕ್ ಬದಲು ಒಂದು ಕೆಜಿ ಸಕ್ಕರೆ ವಿತರಣೆ

h2 bj52 11zon Featured Story, State News, Vijayapura
ವಿಜಯಪುರ : ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀಜಿ ಜಯಂತೋತ್ಸವವನ್ನು ವಿಜಯಪುರದ ದರಬಾರ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ವಿಭಿನ್ನವಾಗಿ ಆಚರಿಸಲಾಯಿತು. ಸ್ವಚ್ಛತೆಯ ಜಾಗೃತಿಗಾಗಿ ಬಳಸಿ ಬಿಸಾಡಿದ ಪ್ಲಾಸ್ಟಿಕ್ ಸಂಗ್ರಹಿಸಿ ಅದಕ್ಕೆ ಪೂರಕವಾಗಿ ಸಕ್ಕರೆ ನೀಡಲಾಯಿತು. `ಕಹಿ ಕೊಟ್ಟು ಸಿಹಿ ಪಡೆಯಿರಿ’ ಎಂಬ ಸಂದೇಶದನ್ವಯ ಈ ಕಾರ್ಯಕ್ರಮ ಸಂಘಟಿಸಲಾಗಿತ್ತು. ಸಮಾರಂಭದಲ್ಲಿ ಐದು ಕ್ವಿಂಟಾಲ್ ಪ್ಲಾಸ್ಟಿಕ್ ಪಡೆದುಕೊಂಡು ಪೂರಕವಾಗಿ ಜನರಿಗೆ ಸಕ್ಕರೆ ವಿತರಿಸಲಾಯಿತು.
ಸಮಾರಂಭ ಉದ್ಘಾಟಿಸಿದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಜೇಶ ದರಬಾರ ಮಾತನಾಡಿ, ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದೆ, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಪ್ರತಿಯೊಬ್ಬರ ಸಂಕಲ್ಪವಾಗಬೇಕು, ಪ್ಲಾಸ್ಟಿಕ್ ಕರಗುವುದಿಲ್ಲ, ಹೀಗಾಗಿ ತನ್ನ ಕೆಟ್ಟ ಪ್ರಬಾವವನ್ನು ಸದಾ ಹೋಗುತ್ತಲೇ ಹೋಗುತ್ತದೆ, ಹೀಗಾಗಿ ಪ್ಲಾಸ್ಟಿಕ್ ಅಪಾಯಕಾರಿಯಾಗಿದೆ. ಪ್ಲಾಸ್ಟಿಕ್ ಬಳಕೆ ಆದಷ್ಟು ಕಡಿಮೆ ಮಾಡುವ ಕಾರ್ಯ ಮಾಡಬೇಕಿದೆ ಎಂದರು.
ಮಹಾತ್ಮ ಗಾಂಧೀಜಿಯವರು ಕಂಡ ಕನಸನ್ನು ನನಸು ಮಾಡುವ ದೃಷ್ಟಿಯಿಂದ ಹಾಗೂ ಸ್ವಚ್ಛ ಭಾರತ ಅಭಿಯಾನದ ಆಶಯದಂತೆ ವಿಜಯಪುರ ನಗರವನ್ನು ಪ್ಲಾಸಿಕ್ ಮುಕ್ತ ನಗರವನ್ನಾಗಿ ಮಾಡುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಆಡಳಿತ ಮಂಡಳಿಯ ಸದಸ್ಯ ವಿಕಾಸ ದರಬಾರ ಮಾತನಾಡಿ, ದಿನನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಪರಿಸರವನ್ನು ಸಂರಕ್ಷಿಸುವ ದೃಷ್ಟಿಯಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು. ಸಿ ಸ್ವಚ್ಚ ಭಾರತ ಅಭಿಯಾನದ ಕನಸು ನನಸು ಮಾಡಿ ಎಂದರು.
ನ್ಯಾಯವಾದಿ ಕೆ.ಬಿ. ಪಾಟೀಲ, ಸಂಘದ ಸಮನ್ವಯ ಅಧಿಕಾರಿ ಡಾ. ವಿನಾಯಕ ಗ್ರಾಮ ಪುರೋಹಿತ, ವಿಶ್ರಾಂತ ಶಿಕ್ಷಕ ಎಂ.ಕೆ. ಪತ್ತಾರ, ಆಡಳಿತ ಮಂಡಳಿಯ ಸದಸ್ಯರಾದ ಆದಿತ್ಯ ದರಬಾರ, ರಾಕೇಶ ದರ್ಬಾರ, ಪಾರ್ಥ್ ದರಬಾರ, ಪ್ರಕಾಶ ರಾಠೋಡ ಉಪಸ್ಥಿತರಿದ್ದರು.
ಬಿ.ಎಚ್. ಕುಲಕರ್ಣಿ ಹಾಗೂ ಪ್ರಮೋದ ಕುಲಕರ್ಣಿ ಸ್ವಾಗತಿಸಿದರು. ವಿಶ್ವನಾಥ ಗುಜರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ಆದ್ಯ ವಂದಿಸಿದರು

Latest Indian news

Popular Stories