ಹಿಂದುತ್ವದ ಹುನ್ನಾರ ಹತ್ತಿಕ್ಕಲು ಜಾತ್ಯಾತೀತ ರಾಷ್ಟ್ರ ನಿರ್ಮಿಸಲು ಜಿಲ್ಲಾ ಮಟ್ಟದ ಬಹೃತ್ ಸಮಾವೇಶ

ಬೀದರ: ಹಿಂದುತ್ವದ ಹುನ್ನಾರ ಹತ್ತಿಕ್ಕಿ ಜಾತ್ಯಾತೀತ ರಾಷ್ಟç ನಿರ್ಮಾಣ ಮಾಡುವ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಮಾ. ೯ರಂದು ಸಾ. ೪ ಗಂಟೆಗೆ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ. ಡಿ.ಜಿ.ಸಾಗರ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ದಲಿತ ಸಂಘರ್ಷ ಸಮಿತಿ
ಜಿಲ್ಲಾ ಘಟಕದ ವತಿಯಿಂದ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ
ಮಾತನಾಡಿದ ಅವರು ಸಂವಿಧಾನದ ೧೪ನೇ ಅನುಚ್ಛೇದದ ಪ್ರಕಾರ ಸರ್ವರೂ ಸಮಾನರು ಎಂದು ಹೇಳುತ್ತದೆ. ಆದರೆ ಭಾರತೀಯ ಜನತಾ ಪಕ್ಷವು ಸಂವಿಧಾನವನ್ನು ಹೊಸಕಿ ಹಾಕುವ ಕಾರ್ಯ ಮಾಡುತ್ತಿದೆ. ಸರ್ವ ಉದ್ಯಮಗಳು ಖಾಸಗೀಕರಣಗೊಳಿಸುತ್ತಿದೆ.

ನ್ಯಾಯಾಂಗ, ಇಡಿ, ಸಿಬಿಐ ಸೇರಿದಂತೆ ಹಲವು ತನಿಖಾ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ವರ್ಷಕ್ಕೆ ೨ ಕೋಟಿ ಉದ್ಯೋಗ ನೀಡುವುದು, ೧೫ ಲಕ್ಷ ಪ್ರತಿಯೊಬ್ಬರ ಖಾತೆಗೆ ಜಮಾ ಮಾಡುವುದು, ತೆರಿಗೆಯಲ್ಲಿ ರಾಜ್ಯದ ಪಾಲು ನೀಡುವುದು ಬಿಸಿಲು ಕುದುರೆಯಾಗಿದೆ. ಅಸ್ಪೃಶ್ಯತೆ, ಬಡತನ ಮತ್ತು ಅಸಮಾನತೆ ಜೀವಂತವಿಡಲು ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಹಿಂದುತ್ವದ ವಿಚಾರಗಳ ವಿರುದ್ಧ ಈ ಸಮಾವೇಶ ಜರುಗುತ್ತಿದ್ದು,ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತಕ್ಕಾಗಿ ತಪ್ಪದೇ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಈ ಸಮಾವೇಶವನ್ನು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಉದ್ಘಾಟನೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಮತ್ತು ಹಜ್ ಸಚಿವ ರಹಿಂಖಾನ್, ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ, ರಾಜಶೇಖರ ಪಾಟೀಲ,ನಗರಸಭೆ ಅಧ್ಯಕ್ಷ ಎಂ.ಡಿ.ಗೌಸ್, ಮಾಜಿ ವಿಧಾನ ಪರಿಷತ್ ಸದಸ್ಯ
ವಿಜಯಸಿಂಗ್, ಅಲ್ಪಸಂಖ್ಯಾತ ಕಾಂಗ್ರೇಸ್‌ನ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ಕಾಂಗ್ರೇಸ್ ಮುಖಂಡ ಧನರಾಜ ತಾಳಂಪಳ್ಳಿ,ನ್ಯಾಯವಾದಿ ಬಾಬುರಾವ ಹೊನ್ನಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಮೃತರಾವ ಚಿಮಕೋಡೆ, ಬಸವರಾಜ ಪಾಟೀಲ, ಫನಾಂಡಿಸ್ ಹಿಪ್ಪಳಗಾAವೆ, ಬಾಬು ಟೈಗರ್ ರಮೇಶ ಡಾಕುಳಗಿ, ಕಾಶಿನಾಥ ಚಲವಾ,ದಿಗಂಬರ ಮಡಿವಾಳ, ರಾಜು ಕಡ್ಯಾಳ, ಗಾಲಿಬ ಹಾಸ್ಮಿ, ಸುರೇಶ ಹಾದಿಮನಿ,
ವಿಜಯಕುಮಾರ ಸೋನಾರೆ, ಸುಮಂತ ಕಟ್ಟಿಮನಿ, ರಾಜು ಬನೇರ,ಅಭಿ ಕಾಳೆ, ಸುಭಾಷ ಟಿಳ್ಳೇಕರ್, ಅರುಣ ಪಟೇಲ್ ಭಾಗವಹಿಸುವರು.

ಅಧ್ಯಕ್ಷತೆಯನ್ನು ಮಾರುತಿ ಬೌದ್ಧೆ ವಹಿಸಲಿದ್ದಾರೆ ಎಂದು
ತಿಳಿಸಿದರು.ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾರುತಿ ಬೌದ್ಧೆ ಮಾತನಾಡಿ ಮಾ. ೯ರಂದು ಪ್ರಜಾಸತ್ತಾತ್ಮಕ ರಾಷ್ಟç ನಿರ್ಮಾಣಕ್ಕಾಗಿ ನಡೆಯುವ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಎಲ್ಲಾ ದಲಿತಪರ ಹಾಗೂ ಸಮಾನ ಮನಸ್ಕ ಸಂಘಟನೆಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು.

ಸಮಾವೇಶದಲ್ಲಿ ಸುಮಾರು ೫ ರಿಂದ ೬ ಸಾವಿರ ಜನರು
ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಅರುಣ
ಪಟೇಲ್, ಪ್ರಮುಖರಾದ ರಾಜಕುಮಾರ ವಾಗ್ಮಾರೆ, ಎಚ್.ಶಂಕರ,ರಾಜ್ಯ ಖಜಾಂಚಿ ಬಿ.ಸಿ.ವಾಲಿ ಉಪಸ್ಥಿತರಿದ್ದರು.

ಇದೇ ವೇಳೆ ಸಮಾವೇಶದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.

Latest Indian news

Popular Stories