Featured StoryUdupi
ಡಾ. ಶಿವರಾಮ ಕಾರಂತ ಟ್ರಸ್ಟ್ ಗೆಹೊಸ ಅಧ್ಯಕ್ಷರು ಮತ್ತು ಸದಸ್ಯರ ನೇಮಕ

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಡುಪಿಯ ಡಾ. ಶಿವರಾಮ ಕಾರಂತ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಡಾ. ಗಣನಾಥ ಎಕ್ಕಾರ್ ಅವರು ನೇಮಕಗೊಂಡಿದ್ದಾರೆ.
ಸದಸ್ಯರಾಗಿ ಶ್ರೀ ಉಲ್ಲಾಸ್ ಕಾರಂತ, ಡಾ. ಪ್ರಸಾದ್ ರಾವ್, ಶ್ರೀಮತಿ ಆತ್ರಾಡಿ ಅಮೃತಾ ಶೆಟ್ಟಿ, ಡಾ. ಭಾರತಿ ಮರವಂತೆ, ಶ್ರೀ ಸತೀಶ್ ಕೊಡವೂರು, ಶ್ರೀ ಮಂಚಿ ರಮೇಶ್, ಶ್ರೀ ಸಂತೋಷ್ ನಾಯಕ್ ಪಟ್ಲ, ಶ್ರೀ ಚೇತನ ತೆರಾಡಿ, ಶ್ರೀ ಜಿ.ಎಂ. ಶರೀಫ್ ಹೂಡೆ ಹಾಗೂ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ (ಸದಸ್ಯ ಕಾರ್ಯದರ್ಶಿ) ನೇಮಕಗೊಂಡಿದ್ದಾರೆ.