ಬಂಗಾಳ: ಜಲ್ಪೈಗುರಿ ಜಿಲ್ಲೆಯಲ್ಲಿ ಹಠಾತ್ ಚಂಡಮಾರುತ 5 ಸಾವು, 500 ಜನರಿಗೆ ಗಾಯ

ಕೋಲ್ಕತ್ತಾ: ಮಾರ್ಚ್ 31 ರಂದು ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಹಠಾತ್ ಚಂಡಮಾರುತದಿಂದ ಐವರು ಸಾವನ್ನಪ್ಪಿದ್ದು, 500 ಜನರು ಗಾಯಗೊಂಡರು, ನೂರಾರು ಮನೆಗಳಿಗೆ ಹಾನಿಯಾಗಿದೆ.

ಚಂಡಮಾರುತವನ್ನು ಕೆಲವು ಸುದ್ದಿವಾಹಿನಿಗಳು ‘ಸೈಕ್ಲೋನ್’ ಎಂದು ವರದಿ ಮಾಡುತ್ತಿವೆ.ದುಪ್ಗುರಿ ಮತ್ತು ಮೇನಾಗುರಿ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ.

ಗಾಯಗೊಂಡ 170 ಜನರನ್ನು ಜಲ್ಪೈಗುರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 200 ಮಂದಿಯನ್ನು ಮೇನಗುರಿ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಸುಮಾರು 100 ಮಂದಿ ಬರ್ನೇಶ್ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

Latest Indian news

Popular Stories