ಈಶ್ವರಪ್ಪ ಬಂಡಾಯ ಸ್ಪರ್ಧೆ: ಶೀಘ್ರದಲ್ಲಿ ಗೊಂದಲಗಳು ಬಗೆಹರಿಯುತ್ತದೆ; ಕೋಟ ಶ್ರೀನಿವಾಸ ಪೂಜಾರಿ

ಚಿಕ್ಕಮಗಳೂರು : ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಸ್ಪರ್ಧೆ ವಿಚಾರ ಎರಡು ದಿನದಲ್ಲಿ ಎಲ್ಲವೂ ಬಗೆಹರಿಯುತ್ತದೆ. ಹಿರಿಯ ನಾಯಕರು ಈಶ್ವರಪ್ಪ ಜೊತೆ ಮಾತುಕತೆ ನಡೆಸುತ್ತಾರೆ. ಗೊಂದಲಗಳು ಬಗೆಹರಿಯುತ್ತದೆ ಎಂಬ ವಿಶ್ವಾಸ ಇದೆ. ಚರ್ಚೆಗೆ ಅವಕಾಶವಾಗಿರುವುದು ಸತ್ಯ ಎಂದು ಉಡುಪಿ – ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಮಾತನಾಡಿದ ಅವರು, ಹಾವೇರಿ ಟಿಕೆಟ್ ಕಾಂತೇಶ್ ಗೆ ನೀಡಬೇಕಿತ್ತು ಎಂಬುವುದು ಈಶ್ವರಪ್ಪನವರ ಬಯಕೆಯಾಗಿತ್ತು. ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಟಿಕೆಟ್ ಹಂಚಿಕೆ ಮಾಡಬೇಕಾಗುತ್ತದೆ. ಎಲ್ಲವನ್ನು ಸಮನ್ವಯವಾಗಿಸಿಕೊಂಡು ಹೋಗುವುದು ಪಕ್ಷದ ಜವಾಬ್ದಾರಿ.ಪಾರ್ಟಿ ತೀರ್ಮಾನ ತೆಗೆದುಕೊಳ್ಳುವಾಗ ವ್ಯತ್ಯಾಸವಾಗಿರಬಹುದು. ಈ ಸಮಸ್ಯೆಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

Latest Indian news

Popular Stories