ಕಾಶ್ಮೀರದಲ್ಲಿ ವಿಧಿ 370 ರದ್ದತಿ ನಂತರವೂ ಭಯೋತ್ಪಾದಕ ದಾಳಿ ಹೇಗೆ ನಡೆಯಿತು? ಮೋದಿಯನ್ನು ಪ್ರಶ್ನಿಸಿದ ಸಂಜಯ್ ರಾವತ್!

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಬಸ್ಸಿನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ 9 ಮಂದಿ ಹತರಾಗಿ ಹಲವರಿಗೆ ಗಾಯವಾಗಿತ್ತು. ಇದೀಗ ಈ ಘಟನೆಯ ಕುರಿತು ಶಿವಸೇನೆ ನಾಯಕ ಸಂಜಯ್ ರಾವತ್ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ಪ್ರಶ್ನೆ ಎತ್ತಿದ್ದಾರೆ.

ಪ್ರಧಾನಿ ಮೋದಿ ಬೊಬ್ಬೆ ಹೊಡೆದು ಹೊಡೆದು 370 ರ ರದ್ಧತಿ ಕುರಿತು ಹೇಳುತ್ತಿದ್ದರು. ವಿಧಿ 370 ರದ್ಧತಿ ಹೊರತಾಗಿ ಭಯೋತ್ಪಾದಕ ದಾಳಿ ಹೇಗೆ ನಡೆಯಿತು? ಇದು ಹೊಣೆ ಯಾರು? ಎಂದು ಮೋದಿ ಸರಕಾರದ ವೈಫಲ್ಯದ ಕುರಿತು ಖಡಕ್ ಪ್ರಶ್ನೆ ಎತ್ತಿದ್ದಾರೆ.

ಈ ಭಯೋತ್ಪಾದಕ ದಾಳಿಯಲ್ಲಿ ಒಂಭತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

 

Latest Indian news

Popular Stories