ಎಕ್ಸಿಟ್ ಪೋಲ್: ಡಿಬಿ‌ಲೈವ್ ಮತದಾನೋತ್ತರ ಸಮೀಕ್ಷೆಯಲ್ಲಿ “ಇಂಡಿಯಾ” ಮೈತ್ರಿಕೂಟಕ್ಕೆ 260-290 ಸ್ಥಾನ – ಮುಗ್ಗರಿಸಲಿದೆ ಎನ್.ಡಿ.ಎ ಮೈತ್ರಿಕೂಟ

ದಿ ಹಿಂದುಸ್ತಾನ್ ಗಝೆಟ್: ಬಹುತೇಕ ಎಲ್ಲ ಎಕ್ಸಿಟ್ ಪೋಲ್ ಗಳು ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ‌ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರೆ ಡಿಬಿ ಲೈಬ್ ಸಮೀಕ್ಷೆ ಮಾತ್ರ ಎನ್.ಡಿ.ಎ ಮೈತ್ರಿಕೂಟಕ್ಕೆ ಢವಢವ ಸೃಷ್ಟಿಸಿದೆ.

ಡಿ.ಬಿ ಲೈವ್ ಸಮೀಕ್ಷೆಯ ಪ್ರಕಾರ, NDA 543 ಸ್ಥಾನಗಳಲ್ಲಿ 215-245 ಸ್ಥಾನಗಳಿಸಿದೆ. ಇಂಡಿಯಾ‌ ಮೈತ್ರಿಕೂಟ 260-290 ಸ್ಥಾನ ಪಡೆಯಲಿದೆ ಎಂದಿದೆ. ಇತರರು 28-48 ಸ್ಥಾನ ಪಡೆದುಕೊಳ್ಳಲಿದೆಯೆಂದು‌ ತನ್ನ ಸಮೀಕ್ಷೆಯ ಫಲಿತಾಂಶ ಉಲ್ಲೇಖಿಸಿದೆ.

ಬಿಹಾರದಲ್ಲಿ NDA ಮೈತ್ರಿಕೂಟ 14-16 ಸ್ಥಾನಕ್ಕೆ‌ಮುಗ್ಗರಿಸಲಿದೆ. ಇಂಡಿಯಾ ಮೈತ್ರಿಕೂಟ 24-26 ಸ್ಥಾನ ಗೆಲ್ಲಲಿದೆಯೆಂದು ಸಮೀಕ್ಷೆ ಬೆಳಕು ಚೆಲ್ಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ 18-20 ಸ್ಥಾನ ಗೆದ್ದರೆ ಬಿಜೆಪಿ, ಜೆಡಿಎಸ್ ಮೈತ್ರಿಕೂಟ8-10 ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದೆ. ಇನ್ನು ಉತ್ತರ ಪ್ರದೇಶದಲ್ಲಿ NDA 46-48 ಮತ್ತು ಇಂಡಿಯಾ ಮೈತ್ರಿಕೂಟ 32-34 ಸ್ಥಾನ ಪಡೆಯಲಿದೆ ಎಂದೂ ಊಹಿಸಿದೆ. ಒಟ್ಟಿನಲ್ಲಿ ಡಿಬಿ ಲೈವ್ ಸಮೀಕ್ಷೆ ಒನ್ ಸೈಡ್ ಆಗಿದ್ದ ಎಕ್ಸಿಟ್ ಪೋಲ್’ಗೆ ವ್ಯತಿರಿಕ್ತವಾಗಿದ್ದು ಈ ಮೂಲಕ ಫಲಿತಾಂಶ ದಿನದ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಸಮೀಕ್ಷೆಯ ಸಂಪೂರ್ಣ ವೀಡಿಯೋ ವೀಕ್ಷಿಸಿ:

Latest Indian news

Popular Stories