ಸೌದಿ: ಮಂಗಳವಾರ ಹಜ್ ಸಮಯದಲ್ಲಿ ಕನಿಷ್ಠ 550 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ರಾಜತಾಂತ್ರಿಕರು ಮಾಹಿತಿ ನೀಡಿದ್ದು ತೀವ್ರ ತಾಪಮಾನದ ಕಾರಣ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸಾವನ್ನಪ್ಪಿದವರಲ್ಲಿ ಕನಿಷ್ಠ 323 ಮಂದಿ ಈಜಿಪ್ಟಿನವರು, ಅವರಲ್ಲಿ ಹೆಚ್ಚಿನವರು ಶಾಖ-ಸಂಬಂಧಿತ ಕಾಯಿಲೆಗಳಿಗೆ ತುತ್ತಾಗಿದ್ದಾರೆ.
“ಅವರೆಲ್ಲರೂ (ಈಜಿಪ್ಟಿನವರು) ಶಾಖದ ಕಾರಣಕ್ಕೆ ಸತ್ತಿದ್ದಾರೆ” ಎಂದು ಅಧಿಕೃತವಾಗಿ ಹೇಳಿದ್ದು ಒರ್ವರು ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಕನಿಷ್ಠ 60 ಜೋರ್ಡಾನಿಯನ್ನರು ಸಹ ಸಾವನ್ನಪ್ಪಿದ್ದಾರೆ. ಎಎಫ್‌ಪಿ ಲೆಕ್ಕಾಚಾರದ ಪ್ರಕಾರ, ಇಲ್ಲಿಯವರೆಗೆ 577 ಮಂದಿಮೃತಪಟ್ಟಿದ್ದಾರೆ. ಸೋಮವಾರ ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ (125 ಫ್ಯಾರನ್‌ಹೀಟ್) ತಲುಪಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ.