ಕುಸಿಯುತ್ತಿರುವ ಶೇರು ಮಾರುಕಟ್ಟೆ: “ಜೂನ್ 4 ರ ಮೊದಲು” ಖರೀದಿಸಿ ಎಂದು ಅಮಿತ್ ಶಾ ಹೇಳಿದ್ದೇಕೆ? | ಬಿಜೆಪಿ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆಯೇ ಎಂಬ ಪ್ರಶ್ನೆಗೆ “ಹೇಳಿದ್ದೇನು”?

ನವ ದೆಹಲಿ: ಷೇರು ಮಾರುಕಟ್ಟೆಯನ್ನು ಚುನಾವಣೆಗಳೊಂದಿಗೆ ಜೋಡಿಸಲಾಗದು. ಆದರೆ ಸ್ಥಿರ ಸರ್ಕಾರವು ಶೇರು ಮಾರುಕಟ್ಟೆ ಉತ್ತಮವಾಗಿ ಕಾರ್ಯನಿರ್ವಹಿಸಲು ದಾರಿ ಮಾಡಿಕೊಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ NDTV ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮುನ್ನಡೆ ಸಾಧಿಸಿದ ಪರಿಣಾಮವಾಗಿ ಜೂನ್ 4 ರ ನಂತರ ಮಾರುಕಟ್ಟೆ ಮೇಲೆರಲಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಜೂನ್ 4 ರಂದು ಮತ ಎಣಿಕೆಯೊಂದಿಗೆ ಏಳು ಹಂತಗಳಲ್ಲಿ ನಡೆದ ಚುನಾವಣೆ ಮುಕ್ತಾಯವಾಗಲಿದೆ.

ಕಳೆದ ಕೆಲವು ಸೆಷನ್‌ಗಳಲ್ಲಿ ವಿವಿಧ ಅಂಶಗಳಿಂದ ಷೇರು ಮಾರುಕಟ್ಟೆಗಳು ಭಾರಿ ಏರಿಳಿತ ಕಂಡಿವೆ. ಷೇರು ಮಾರುಕಟ್ಟೆ ಕುಸಿತ ಬಿಜೆಪಿಯ ಕಳಪೆ ಪ್ರದರ್ಶನವನ್ನು ಸೂಚಿಸುತ್ತವೆ ಎಂಬ ವದಂತಿಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಮಾರುಕಟ್ಟೆಗಳು ಇದಕ್ಕೂ ಮೊದಲು 16 ಬಾರಿ ದೊಡ್ಡ ಏರಿಳಿತ ಕಂಡಿವೆ ಎಂದು ಸಮಜಾಯಿಷಿಕೆ ನೀಡಿದ್ದಾರೆ.

“ಸ್ಟಾಕ್ ಮಾರುಕಟ್ಟೆ ಕುಸಿತವನ್ನು ಚುನಾವಣೆಗಳೊಂದಿಗೆ ಜೋಡಿಸಬಾರದು.ಆದರೆ ಅಂತಹ ವದಂತಿ ಹರಡಿದ್ದರೂ ಸಹ, ಜೂನ್ 4 ರ ಮೊದಲು (ಷೇರುಗಳನ್ನು) ಖರೀದಿಸಲು ನಾನು ನಿಮಗೆ ಸಲಹೆ ನೀಡುತ್ತೇನೆ. ಅದು ಏರಿಕೆ ಆಗುತ್ತದೆ” ಎಂದು ಅವರು ಹೇಳಿದ್ದಾರೆ.

ಸೆನ್ಸೆಕ್ಸ್ ಒಂದು ಲಕ್ಷದ ಗಡಿ ದಾಟದಿದ್ದರೆ ಎಂದು ಕೇಳಿದಕ್ಕೆ ಪ್ರತಿಕ್ರಿಯಿಸಲು ಶಾ ನಿರಾಕರಿಸಿದರು. ಆದರೆ ಸ್ಥಿರ ಸರ್ಕಾರವಿದ್ದಾಗ ಷೇರು ಮಾರುಕಟ್ಟೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಒತ್ತಿ ಹೇಳಿದರು.

ಅದಕ್ಕಾಗಿಯೇ ನಾವು 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದೇವೆ ಮತ್ತು ಸ್ಥಿರವಾದ ಮೋದಿ ಸರ್ಕಾರ ಅಧಿಕಾರದಲ್ಲಿರಲಿದೆ ಎಂದು ನಾನು ಹೇಳುತ್ತಿದ್ದೇನೆ. ಆದ್ದರಿಂದ, ಷೇರು ಮಾರುಕಟ್ಟೆಯು ಖಂಡಿತವಾಗಿಯೂ ಏರುತ್ತದೆ ಎಂದು ಅವರು ಹೇಳಿದರು.

ಬಿಜೆಪಿ “ಅಬ್ ಕಿ ಬಾರ್ 400 ಪಾರ್” ಘೋಷಣೆ ಆರಂಭಿಸಿದ ರೀತಿಯಲ್ಲಿ ಅದರ ವಿಶ್ವಾಸ ಇದೀಗ ಉಳಿದಿಲ್ಲ ಎಂಬುವುದು ಸದ್ಯದ ಚರ್ಚೆ. ವಿರೋಧ ಪಕ್ಷ ಕೂಡ ಬಿಜೆಪಿ ಕಳಪೆ ಪ್ರದರ್ಶನ ನೀಡಿರುವ ಕುರಿತು ವಿಶ್ವಾಸದಿಂದ ಹೇಳುತ್ತಿದ್ದು ಬಿಜೆಪಿಯ ಅಂತರಿಕ ವಲಯದಲ್ಲೂ ಈ ಕುರಿತು ಗೊಂದಲವಿದೆ ಎನ್ನಲಾಗುತ್ತಿದೆ.

Latest Indian news

Popular Stories