ಗೃಹಬಂಧನ ಭೀತಿ: ಕಾಂಗ್ರೆಸ್‌ ಕಚೇರಿಯಲ್ಲಿಯೇ ಮಲಗಿದ ಶರ್ಮಿಳಾ ರೆಡ್ಡಿ; ಫೋಟೋ ವೈರಲ್

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ವೈಎಸ್ ಶರ್ಮಿಳಾ ರೆಡ್ಡಿ ಮತ್ತು ವೈಎಸ್​​​ಆರ್​​​​​ಸಿಪಿ ನಾಯಕ ಮತ್ತು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನಡುವಿನ ರಾಜಕೀಯ ಸಂಘರ್ಷ ಹೆಚ್ಚುತ್ತಿದೆ. ಗುರುವಾರ ವಿಜಯವಾಡದಲ್ಲಿ ಚಲೋ ಸೆಕ್ರೆಟರಿಯೇಟ್ ಪ್ರತಿಭಟನೆಗೆ ಶರ್ಮಿಳಾ ಕರೆ ನೀಡಿದ್ದಾರೆ.

ಈ ಪ್ರತಿಭಟನೆಗೂ ಮುನ್ನ ವೈಎಸ್ ಶರ್ಮಿಳಾ ಗೃಹಬಂಧನ ತಪ್ಪಿಸಲು ಇಡೀ ರಾತ್ರಿ ಕಚೇರಿಯಲ್ಲೇ ಕಳೆದರು. ಇದೀಗ ಶರ್ಮಿಳಾ ನೆಲದ ಮೇಲೆ ಮಲಗಿರುವ ವಿಡಿಯೋವೊಂದು ಇದೀಗ ಹೊರಬಿದ್ದಿದೆ. ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಇಂದು ‘ಚಲೋ ಸೆಕ್ರೆಟರಿಯೇಟ್‌’ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ಕಳೆದ ಐದು ವರ್ಷಗಳಲ್ಲಿ ಯುವಜನರು, ನಿರುದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಂಪೂರ್ಣ ವಿಫಲರಾಗಿದ್ದಾರೆ. ಲಕ್ಷಗಟ್ಟಲೆ ನಿರುದ್ಯೋಗಿ ಯುವಕರಿಗೆ ದ್ರೋಹ ಬಗೆದಿರುವ ಸರ್ಕಾರದ ನೀತಿಯ ವಿರುದ್ಧ ಅಸಮ್ಮತಿ ವ್ಯಕ್ತಪಡಿಸುವ ಹಕ್ಕು ನಮಗಿಲ್ಲವೇ? ಸರ್ಕಾರದ ವಿರುದ್ಧ ಪ್ರಶ್ನಿಸುವ ನಮ್ಮನ್ನು ಸಮಾಜ ವಿರೋಧಿಗಳಂತೆ ಕಾಣಲಾಗುತ್ತಿದೆ’ ಎಂದು ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಕಾಂಗ್ರೆಸ್ ನಾಯಕರನ್ನು ತಡೆಯಲಾಗುತ್ತಿದೆ. ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯುದಿಲ್ಲ ಎಂದಿರುವ ಶರ್ಮಿಳಾ, ಗೃಹ ಬಂಧನದಿಂದ ತಪ್ಪಿಸಿಕೊಳ್ಳಲು ಆಂಧ್ರ ರತ್ನ ಭವನಕ್ಕೆ ತೆರಳಿ ಇಡೀ ರಾತ್ರಿಯನ್ನು ಅಲ್ಲೇ ಕಳೆದಿದ್ದಾರೆ. ಶರ್ಮಿಳಾ ಅವರು ಹಾಸಿಗೆ ಹೊದ್ದು ಕಚೇರಿಯಲ್ಲಿ ಮಲಗಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಏಕಕಾಲದಲ್ಲಿ ನಡೆಯಲಿದೆ.

Latest Indian news

Popular Stories