ಮದುವೆಯ ಕಾರಣಕ್ಕೆ ಮಹಿಳಾ ಅಧಿಕಾರಿ ವಜಾ: ಮಿಲಿಟರಿ ನರ್ಸ್’ಗೆ 60 ಲಕ್ಷ ಪರಿಹಾರ ನೀಡಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಸೂಚನೆ

ನವದೆಹಲಿ: ವಿವಾಹದ ಆಧಾರದ‌ ಮೇಲೆ ಮಹಿಳಾ ನರ್ಸಿಂಗ್ ಅಧಿಕಾರಿಯನ್ನು ಮಿಲಿಟರಿ ನರ್ಸಿಂಗ್ ಸೇವೆಯಿಂದ ವಜಾಗೊಳಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ “ಲಿಂಗ ತಾರತಮ್ಯ ಮತ್ತು ಅಸಮಾನತೆಯ ಪ್ರಕರಣ” ವೆಂದು ಉಲ್ಲೇಖಿಸಿದೆ.

ನ್ಯಾಯಧೀಶರಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ವಿವಾಹದ ಕಾರಣಕ್ಕೆ ಮಹಿಳಾ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿರುವುದು ಅಸಂವಿಧಾನಕವೆಂದು ಅಭಿಪ್ರಾಯ ಪಟ್ಟಿತು.

ಅಂತಹ ಪುರಾಷಧಿಪತ್ಯದ ಆಡಳಿತವನ್ನು ಒಪ್ಪಿಕೊಳ್ಳುವುದು ಮಾನವ ಘನತೆ, ತಾರತಮ್ಯದ ವಿರುದ್ಧದ ಹಕ್ಕು ಮತ್ತು ನ್ಯಾಯಯುತ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ನ್ಯಾಯಪೀಠ ತಿಳಿಸಿತು.

ಅದರಂತೆ ಅರ್ಜಿದಾರರಿಗೆ 60 ಲಕ್ಷ ಪರಿಹಾರ ನೀಡುವಂತೆ ಒಕ್ಕೂಟ ಸರಕಾರ (ಕೇಂದ್ರ ಸರಕಾರ)ಕ್ಕೆ ನ್ಯಾಯಾಲಯ ಸೂಚಿಸಿ ಆದೇಶ ಹೊರಡಿಸಿದೆ. ಎಂಟು ವಾರದೊಳಗೆ ಪರಿಹಾರ ನೀಡಬೇಕು ಇಲ್ಲದಿದ್ದರೆ ಪಾವತಿಸುವರೆಗೆ 12% ವಾರ್ಷಿಕ ಬಡ್ಡಿ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಸೂಚಿಸಿದೆ.

Latest Indian news

Popular Stories