ಚಲನಚಿತ್ರ ನಿರ್ಮಾಪಕ ಜೋಸೆಫ್ ಮನು ಜೇಮ್ಸ್ 31 ನೇ ವಯಸ್ಸಿನಲ್ಲೇ ನಿಧನ

ಎರ್ನಾಕುಲಂ: ಚಲನಚಿತ್ರ ನಿರ್ಮಾಪಕ ಜೋಸೆಫ್ ಮನು ಜೇಮ್ಸ್ ಫೆಬ್ರವರಿ 25 ರಂದು ಕೇರಳದ ಎರ್ನಾಕುಲಂನ ಆಲುವಾದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

31 ವರ್ಷದ ಚಿತ್ರ ನಿರ್ದೇಶಕ ಜೋಸೆಫ್ ಮನು ಅವರ ಅಂತ್ಯಕ್ರಿಯೆ ಭಾನುವಾರ ಕುರವಿಲಂಗಾಡ್‌ ನ ಮೇಜರ್ ಆರ್ಕಿಪಿಸ್ಕೋಪಲ್ ಮಾರ್ತ್ ಮರಿಯಮ್ ಆರ್ಚ್‌ಡೀಕನ್ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರ ಚೊಚ್ಚಲ ನಿರ್ದೇಶನದ ಚಿತ್ರ ‘ನ್ಯಾನ್ಸಿ ರಾಣಿ’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅಹಾನಾ ಕೃಷ್ಣ ಮತ್ತು ಅರ್ಜುನ್ ಅಶೋಕನ್ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದರು.

ನಟಿ ಅಹಾನಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “ರೆಸ್ಟ್ ಇನ್ ಪೀಸ್ ಮನು! ಇದು ನಿಮಗೆ ಸಂಭವಿಸಬಾರದಿತ್ತು!” ಎಂದು ಬರೆದುಕೊಂಡಿದ್ದಾರೆ. ಅಜು ವರ್ಗೀಸ್ ಅವರು ಸಂತಾಪ ಸೂಚಿಸಿ, “ತುಂಬಾ ಬೇಗ ಹೋದ ಸಹೋದರ” ಎಂದು ಬರೆದಿದ್ದಾರೆ.

ಜೋಸೆಫ್ ಮನು ಅವರು ಬಾಲನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. 2004ರಲ್ಲಿ ಅವರು ನಟಿಸಿದ ಮೊದಲ ಚಿತ್ರ ಬಿಡುಗಡೆಯಾಗಿತ್ತು. ಅವರು ಮಲಯಾಳಂ, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲೂ ಅಸಿಸ್ಟೆಂಟ್ ಮತ್ತು ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದರು.

Latest Indian news

Popular Stories