ರಷ್ಯಾಕ್ಕೆ ಸೆಕ್ಯೂರಿಟಿ ಗಾರ್ಡ್ ಉದ್ಯೋಗಕ್ಕೆ ಕರೆದೊಯ್ದು ಯುದ್ಧಪೀಡಿತ ಉಕ್ರೈನ್ ಗಡಿಯಲ್ಲಿ ಸೈನಿಕರೊಂದಿಗೆ ನೇಮಕ | ಗುಲ್ಬರ್ಗಾದ ಯುವಕರು ಸೇರಿ 8 ಮಂದಿಯಿಂದ ಸಹಾಯಕ್ಕಾಗಿ ಮನವಿ – ವೀಡಿಯೋ ವೈರಲ್

ಬೆಂಗಳೂರು: ಸೆಕ್ಯೂರಿಟಿ ಗಾರ್ಡ್ ಉದ್ಯೋಗಕ್ಕೆ ಕರೆದೊಯ್ದು ಉಕ್ರೇನ್‌ನೊಂದಿಗೆ ಯುದ್ಧದಲ್ಲಿ ತೊಡಗುವಂತೆ ಒತ್ತಾಯ ಮಾಡಲಾಗುತ್ತಿರುವ ಕುರಿತು ಯುವಕರು ಅಳಲುತೋಡಿಕೊಂಡಿರುವ ವೀಡಿಯೋ ವೈರಲ್ ಮಾಡಲಾಗಿದೆ. ಯುವಕರು ತಮ್ಮ ರಕ್ಷಣೆಗಾಗಿ ಭಾರತದೊಂದಿಗೆ ಈ ವಿನಂತಿ ಮಾಡಿಕೊಂಡಿದ್ದಾರೆ. ಈ ವೀಡಿಯೋವನ್ನು sabha khan ಎಂಬ x ಐಡಿಯಿಂದ ಶೇರ್ ಮಾಡಲಾಗಿದೆ.

ಕರ್ನಾಟಕದ ಗುಲ್ಬರ್ಗಾ, ತೆಲಂಗಾಣ, ಗುಜರಾತ್, ಯುಪಿ ಮತ್ತು ಕಾಶ್ಮೀರದ ಕಾಸ್ಗಂಜ್‌ನಿಂದ ಎಂಟು ಭಾರತೀಯ ಯುವಕರಿಗೆ ಸೆಕ್ಯೂರಿಟಿ ಗಾರ್ಡ್‌ಗಳು ಉದ್ಯೋಗಗಳನ್ನು ನೀಡುವ ನೆಪದಲ್ಲಿ ರಷ್ಯಾಕ್ಕೆ ಕಳುಹಿಸಲಾಗಿದೆ. ಆದರೆ ಅಲ್ಲಿಗೆ ಹೋದ ನಂತರ ರಷ್ಯಾ-ಉಕ್ರೇನ್ ನಡುವಿ ಯುದ್ಧದಲ್ಲಿ ಸೈನ್ಯದೊಂದಿಗೆ ತೊಡಗಿಸಿಕೊಳ್ಳಲು ಒತ್ತಾಯಿಸಿರುವ ಕುರಿತು ಯುವಕರು ತಮ್ಮ ವೀಡಿಯೊದಲ್ಲಿ ತಿಳಿಸಿದ್ದಾರೆ.

ಎಲ್ಲಾ ಎಂಟು ಜನರು @BabaVlogs ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಫ್ರಾಡ್ಸ್ಟರ್ ಹೆಸರಿನ ಯೂಟ್ಯೂಬರ್ ಫೈಸಲ್ ಖಾನ್ ಅವರಿಂದ ವೀಸಾವನ್ನು ಹೊಂದಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಎಲ್ಲಾ ಎಂಟು ಯುವಕರು ಸೈನ್ಯದಲ್ಲಿ ಸೇರ್ಪಡೆಯಾಗುವ ಮೊದಲು ರಷ್ಯಾದ ಭಾಷೆಯಲ್ಲಿ ದಾಖಲೆಗಳಿಗೆ ಬಲವಂತವಾಗಿ ಸಹಿ ಹಾಕಲಾಗಿದೆ.

ಸಂಕಷ್ಟದಲ್ಲಿರುವ ಯುವಕರು ವಿದೇಶಾಂಗ ಸಚಿವ ಜೈ ಶಂಕರ್ ಅವರು ಮಧ್ಯ ಪ್ರವೇಶಿಸಿ ರಕ್ಷಿಸಲು ವಿನಂತಿಸಿದ್ದಾರೆ.

 

Latest Indian news

Popular Stories