ಲೋಕಸಭಾ ಚುನಾವಣೆಯ ಟಿಕೆಟ್ ಸಿಗುವ ಅನುಮಾನದ ನಡುವೆ ಸಕ್ರಿಯ ರಾಜಕೀಯದಿಂದ ಮುಕ್ತಗೊಳಿಸುವಂತೆ ಕೋರಿದ ಮಾಜಿ ಕ್ರಿಕೆಟಿಗ ಗಂಭೀರ್!

ಗೌತಮ್ ಗಂಭೀರ್ ಈ ಬಾರಿ ಲೋಕಸಭಾ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದು ತನ್ನನ್ನು ಸಕ್ರಿಯ ರಾಜಕೀಯ ಕರ್ತವ್ಯದಿಂದ ಮುಕ್ತಗೊಳಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ತಿಳಿಸಿದ್ದಾರೆ‌.

ಕ್ರಿಕೆಟ್ ವಲಯದಲ್ಲಿ ತಮ್ಮ ಬದ್ಧತೆಯನ್ನು ಕೇಂದ್ರೀಕರಿಸುವ ಕಾರಣ ನೀಡಿರುವ ಸಂಸದ ಗೌತಮ್ ಗಂಭೀರ್ ಈ ಮೂಲಕ ಸಕ್ರಿಯ ರಾಜಕೀಯದಿಂದ ದೂರ ಉಳಿಯುವ ಬಯಕೆ ವ್ಯಕ್ತಪಡಿಸಿದ್ದಾರೆ.

2024 ರ ಚುನಾವಣೆಯಲ್ಲಿ ಅವರಿಗೆ ಲೋಕಸಭಾ ಟಿಕೆಟ್ ದೊರಕುವುದು ಅನುಮಾನವಾಗಿತ್ತು. ಈ ಸಂದರ್ಭದಲ್ಲೇ ಅವರ ಈ ನಿರ್ಧಾರ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

“ನನ್ನ ರಾಜಕೀಯ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸುವಂತೆ ನಾನು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಜೀ ಅವರಿಗೆ ಮನವಿ ಮಾಡಿದ್ದೇನೆ. ಇದರಿಂದಾಗಿ ನಾನು ನನ್ನ ಮುಂಬರುವ ಕ್ರಿಕೆಟ್ ಬದ್ಧತೆಗಳ ಮೇಲೆ ಕೇಂದ್ರೀಕರಿಸುತ್ತೇನೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದಗಳು. ಜೈ. ಹಿಂದ್,” ಎಂದು ಗಂಭೀರ್ ಬರೆದು ಕೊಂಡಿದ್ದಾರೆ.

Latest Indian news

Popular Stories