ಮಾಜಿ ವಿಶ್ವ ಸುಂದರಿ ಅಭ್ಯರ್ಥಿ 26 ವರ್ಷದ ಶೆರಿಕಾ ಡಿ ಅರ್ಮಾಸ್ ಕ್ಯಾನ್ಸರ್’ನಿಂದ ಮೃತ್ಯು

ಉರುಗ್ವೆ, ಅಕ್ಟೋಬರ್ 17: ಗರ್ಭಕೋಶಸದ ಕ್ಯಾನ್ಸರ್‌ನೊಂದಿಗೆ ಎರಡು ವರ್ಷಗಳ ಹೋರಾಟದ ನಂತರ ಮಾಜಿ ವಿಶ್ವ ಸುಂದರಿ ಅಭ್ಯರ್ಥಿ 26 ವರ್ಷದ ಶೆರಿಕಾ ಡಿ ಅರ್ಮಾಸ್ ನಿಧನರಾದರು.

ಸ್ಥಳೀಯ ಉರುಗ್ವೆಯ ಮಾಧ್ಯಮಗಳ ಪ್ರಕಾರ, ಶೆರಿಕಾ ಎರಡು ವರ್ಷಗಳ ಗರ್ಭಕೋಶದ ಕ್ಯಾನ್ಸರ್ ರೋಗದಿಂದ ಬಳಲಿ ನಂತರ ಅಕ್ಟೋಬರ್ 13 ರಂದು ನಿಧನರಾದರು.

ಅವರು 2015 ರಲ್ಲಿ ಮಿಸ್ ಉರುಗ್ವೆ ಆಗಿದ್ದರು. ಚೀನಾದಲ್ಲಿ ನಡೆದ 2015 ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಶೇರಿಕಾ ಟಾಪ್ 30 ರೊಳಗೆ ಸ್ಥಾನ ಪಡೆಯದಿದ್ದರೂ, ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಆರು 18 ವರ್ಷ ವಯಸ್ಸಿನವರಲ್ಲಿ ಒಬ್ಬರಾಗಿದ್ದರು.

ಮಾಡೆಲ್ ಆಗುವುದರ ಹೊರತಾಗಿ, ಶೆರಿಕಾ ಡಿ ಅರ್ಮಾಸ್ ಶೇ ಡಿ ಅರ್ಮಾಸ್ ಬ್ಯೂಟಿ ಸ್ಟುಡಿಯೋವನ್ನು ವೈಯಕ್ತಿಕ ಆರೈಕೆ, ಮೇಕಪ್ ಮತ್ತು ಕೂದಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ವೇದಿಕೆಯಾಗಿ ನಡೆಸುತ್ತಿದ್ದರು.

Latest Indian news

Popular Stories