ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮಗ ಕಾಂಗ್ರೆಸ್‌ಗೆ ರಾಜೀನಾಮೆ

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗ ವಿಭಾಕರ್ ಶಾಸ್ತ್ರಿ ಅವರು ಬುಧವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

X ನಲ್ಲಿನ ಪೋಸ್ಟ್‌ನಲ್ಲಿ ಶಾಸ್ತ್ರಿ, “ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷ ಶ್ರೀ ಖರ್ಗೆ ಜೀ! ನಾನು ಈ ಮೂಲಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ, ವಂದನೆಗಳು” ವಿಭಾಕರ ಶಾಸ್ತ್ರಿ ಎಂದು ಬರೆದುಕೊಂಡಿದ್ದಾರೆ‌.

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗ ಮತ್ತು ಹರಿಕೃಷ್ಣ ಶಾಸ್ತ್ರಿ ಅವರ ಪುತ್ರರಾಗಿರುವ ಶಾಸ್ತ್ರಿ ಅವರು ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

ಅಶೋಕ್ ಚವಾಣ್, ಮಿಲಿಂದ್ ದಿಯೋರಾ, ಬಾಬಾ ಸಿದ್ದಿಕಿ, ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್, ಪ್ರಿಯಾಂಕಾ ಚತುರ್ವೇದಿ, ಸುಶ್ಮಿತಾ ದೇವ್, ಆರ್‌ಪಿಎನ್ ಸಿಂಗ್, ಜೈವೀರ್ ಶೆರ್ಗಿಲ್ ಮುಂತಾದವರು ಇತರ ಪಕ್ಷಗಳಿಗೆ ಸೇರ್ಪಡೆಗೊಳ್ಳುವುದರೊಂದಿಗೆ ಕಳೆದ ಕೆಲವು ವರ್ಷಗಳಲ್ಲಿ ಕಾಂಗ್ರೆಸ್ ಸರಣಿ ನಿರ್ಗಮನಕ್ಕೆ ಸಾಕ್ಷಿಯಾಗಿದೆ.

Latest Indian news

Popular Stories